ಉಡುಪಿ ‘ಸ್ಮರಣಿಕಾ’ದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಗೂಡುದೀಪಗಳ ಅಪಾರ ಸಂಗ್ರಹ: ಗ್ರಾಹಕರನ್ನು ಸೆಳೆಯುತ್ತಿದೆ ಆಕರ್ಷಕ ಗೂಡುದೀಪಗಳು

ಉಡುಪಿ:‌ ಮೊಮೆಂಟೊ ಮತ್ತು ಗಿಫ್ಟ್ ವಸ್ತುಗಳಿಗೆ ಹೆಸರುವಾಸಿ ಆದ ಉಡುಪಿಯ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ಸಾಂಪ್ರದಾಯಿಕ ಗೂಡು ದೀಪಗಳ ಅಪಾರ ಸಂಗ್ರಹ ಹೊಂದಿದ್ದು, ರಿಯಾಯಿತಿ ದರದಲ್ಲಿ ಸಿಗಲಿದೆ.

ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ ಮತ್ತು ಉಡುಪಿ ಸಿಟಿ ಬಸ್ಟ್ಯಾಂಡ್ ಹತ್ತಿರದ ಕೆಎಸ್ಆರ್ಟಿಸಿ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿರುವ ಸ್ಮರಣಿಕಾ ಮೊಮೆಂಟೊ, ಗಿಫ್ಟ್ ಸೆಂಟರ್ ಹಾಗೂ ಬಾಂಬೆ ಸ್ವೀಟ್ಸ್ ನಲ್ಲಿ ವಿವಿಧ ರೀತಿಯ ವಿಶೇಷ ಉತ್ಪನ್ನಗಳನ್ನು ಲಭ್ಯವಿದೆ.

ಪರಿಸರ ಸ್ನೇಹಿ ಗೂಡುದೀಪ:

ಸಂಸ್ಥೆಯ ಮಳಿಗೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಾದೇಶಿಕ ಪಾರಂಪರಿಕ ಶೈಲಿಯ ಪರಿಸರಸ್ನೇಹಿ ಗೂಡುದೀಪಗಳ ಬೃಹತ್ ಸಂಗ್ರಹವನ್ನು ಹೊಂದಿದೆ.

ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಮಾಲೀಕ ದಿವಾಕರ್ ಸನಿಲ್ ತಿಳಿಸಿದ್ದಾರೆ.