ಉಡುಪಿ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ (ಎಸಿಸಿಇಎ) ಉಡುಪಿ ಇದರ ಆಶ್ರಯದಲ್ಲಿ ‘ಇಂಜಿನಿಯರ್ ಗಳ ದಿನಾಚರಣೆ’ ಕಾರ್ಯಕ್ರಮ ಇದೇ ಸೆ.15ರಂದು ಸಂಜೆ 6.30ಕ್ಕೆ ಉಡುಪಿ ಕಿದಿಯೂರು ಹೋಟೆಲ್ ನ ಮಾಧವಕೃಷ್ಣ ಹಾಲ್ ನಲ್ಲಿ ನಡೆಯಲಿದೆ.
ಪರಿಸರ ತಜ್ಞ ಡಾ. ಕಲ್ಮಾಡಿ ಸತೀಶ್ ಕಾಮತ್, ನೋಂದಾಯಿತಿ ಮೌಲ್ಯಮಾಪಕರಾದ ರವಿ ಪ್ರಸಾದ್ ಉಪಾಧ್ಯಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿ ನಗರಸಭೆಯ ನಿವೃತ್ತ ಎಇಇ ಗಣೇಶ್ ಕೆ., ಉಡುಪಿ ಮೆಸ್ಕಾಂ ಎಇಇ ಎಸ್. ಗಣರಾಜ್ ಭಟ್, ಆರ್ಕಿಟೆಕ್ಟ್ ವಿಷ್ಣುಮೂರ್ತಿ ಭಟ್ ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರ ಕೆಮ್ತೂರು ಕೃಷ್ಣಮೂರ್ತಿ ಭಟ್ ಅವರನ್ನು ಸನ್ಮಾನಿಸಲಾಗುವುದು ಎಂದು ಎಸಿಸಿಇಎ ಅಧ್ಯಕ್ಷ ಯೋಗೀಶ್ ಚಂದ್ರ ಧಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರ ಕೆಮ್ತೂರು ಕೃಷ್ಣಮೂರ್ತಿ ಭಟ್ ಅವರನ್ನು ಸನ್ಮಾನಿಸಲಾಗುವುದು