ಉಡುಪಿ: ಸುಶ್ಮಿತಾ ‌ಆಚಾರ್ಯಗೆ ಮಿಸ್ ಕೋಸ್ಟಲ್-2024 ಕಿರೀಟ.

ಉಡುಪಿ: ಸುಶ್ಮಿತಾ ಆಚಾರ್ಯ ಅವರು ಈ ವರ್ಷದ ಮಿಸ್ ಕೋಸ್ಟಲ್-2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಉಡುಪಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಭಾವಂತೆಯಾಗಿರುವ ಸುಶ್ಮಿತಾ ಆಚಾರ್ಯ, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಈ ಮೊದಲು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಸದ್ಯ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ‘ಸುಜಾಸ್ ‘ನ ಜಯಲಕ್ಷ್ಮೀ ಇವರಿಗೆ ಮಾರ್ಗದರ್ಶನ ಮಾಡಿದ್ದರು. ಇವರು ಮುಲ್ಕಿಯ ಕೆ.ಸತೀಶ್ ಆಚಾರ್ಯ, ಸ್ವಾತಿ ಆಚಾರ್ಯ ದಂಪತಿ ಪುತ್ರಿ ಆಗಿದ್ದಾರೆ.