ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಿಟ್ಪಾಡಿ ಕಸ್ತೂರ್ಬಾನಗರದ ಶ್ರೀ ಭಗವತೀ ನಾಸಿಕ್ ಕಲಾತಂಡದ ಕಲಾವಿದರು ಮಗುವಿನ ವೈದ್ಯಕೀಯ ಚಿಕಿತ್ಸೆಯ ಸಹಾಯಾರ್ಥವಾಗಿ ವಿಶೇಷ ವೇಷದೊಂದಿಗೆ ಜನರನ್ನು ರಂಜಿಸಲಿದ್ದಾರೆ.
ಈ ಕಾರ್ಯಕ್ರಮದ ಪೋಸ್ಟರ್ನ್ನು ಕಸ್ತೂರ್ಬಾನಗರದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಅಣ್ಣಯ್ಯ ಸೇರಿಗಾರ್, ಸಂಸ್ಥೆಯ ಗೌರವಾಧ್ಯಕ್ಷ ಶ್ರೀಧರ ದೇವಾಡಿಗ, ಶಶಿರಾಜ್ ಕುಂದರ್, ಚರಣ್ ಬಂಗೇರ, ಕಲಾ ತಂಡದ ಪ್ರಣಮ್, ಸುಧೀರ್, ಉಮೇಶ್ ಉಪಸ್ಥಿತರಿದ್ದರು. ವೇಷಧರಿಸಿ ಸಂಗ್ರಹಿಸಿದ ಮೊತ್ತವನ್ನು ರಕ್ತದ ಕಾಯಿಲೆಯಿಂದ ಬಳಲುತ್ತಿರುವ ಅನ್ವಿಶ್ ನಾಯ್ಕ್ ಎಂಬ 4 ವರ್ಷದ ಮಗುವಿನ ಶಸ್ತ್ರಚಿಕಿತ್ಸೆಗೆ ನೀಡುವುದಾಗಿ ಸಂಘಟಕರು ತಿಳಿಸಿದ್ದಾರೆ.