ಉಡುಪಿ: ಆಮ್ ಕೇರ್ ಕ್ಲಿನಿಕ್, ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಉಡುಪಿ ಇವರುಗಳಿಂದ ಲಕ್ಷ್ಮೀಂದ್ರನಗರದ ಆಮ್ ಕೇರ್ ಕ್ಲಿನಿಕ್ ನ ಮುಂಬಾಗದಲ್ಲಿ ರೋ.ಡಾ.ಸುರೇಶ್ ಶೆಣೈ ಯವರ ಪ್ರಾಯೋಜಕತ್ವದಲ್ಲಿ ರಸ್ತೆಸುರಕ್ಷತೆ ಮತ್ತು ಜಲಸಾಕ್ಷರತೆಬಗ್ಗೆ ಜನಜಾಗೃತಿ ಗಾಗಿ ಹಾಕಿದ ಫಲಕಗಳನ್ನು ರೋಟರಿಗವರ್ನರ್ ರೋ. ಸಿಎ ದೇವಾನಂದರವರು ಉದ್ಘಾಟಿಸಿ ಈವರ್ಷದ ಜಿಲ್ಲಾಯೋಜನೆಯ ಈ ಕಾರ್ಯಕ್ರಮ ಬಹಳ ಸುತ್ಯ ಎಂದು ಹೇಳಿ ಇದನ್ನು ಸಾಕಾರಗೊಳಿಸಿದ ರೋ.ಡಾ.ಸುರೇಶ್ ಶೆಣೈ ಯವರನ್ನು ಅಭಿನಂದಿಸಿದರು.
ಮೊದಲಿಗೆ ರೋಟರಿ ಅಧ್ಯಕ್ಷ ರೋ.ಗುರುರಾಜ ಭಟ್ ರು ಎಲ್ಲರನ್ನೂ ಸ್ವಾಗತಿಸಿದರು. ಇನ್ನ ರ್ ವೀಲ್ ಅಧ್ಯಕ್ಷೆ ಸುರೇಖಾ ಕಲ್ಕೂರ್, ರೋಟರಿ ಕಾರ್ಯದರ್ಶಿ ರೋ.ವೈಷ್ಣವಿ ಆಚಾರ್ಯ, ಇನ್ನರ್ ವೀಲ್ ಕಾರ್ಯದರ್ಶಿ ರೋ. ಪದ್ಮಿನಿ ಭಟ್ ಮತ್ತು ಅನೇಕ ರೋಟರಿ ಮತ್ತು ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.
ಬೆಳಿಗ್ಗೆ 10 ಗಂಟೆಯಿಂದ ಆಮ್ ಕೇರ್ ಕ್ಲಿನಿಕ್ನಲ್ಲಿ ಮೂಳೆಸಾಂದ್ರತೆ ಪರಿಕ್ಷಾಶಿಬಿರ ನಡೆದಿದ್ದು ನೂರಕ್ಕೂ ಮಿಕ್ಕಿ ಜನರು ಅದರಸದುಪಯೋಗ ಪಡೆದರು.












