ಉಡುಪಿ: ಯುಗಾದಿ ಹಬ್ಬ ಹಿನ್ನೆಲೆ- ಊರಿನತ್ತ ಹೊರಟ ಸಾವಿರಾರು ವಲಸೆ ಕಾರ್ಮಿಕರು- ಕೆಎಸ್ ಆರ್ ಟಿಸಿ ನಿಲ್ದಾಣದಲ್ಲಿ ರಶ್‌….

ಉಡುಪಿ: ಹಿಂದೂಗಳ ಹೊಸ ವರ್ಷ, ಯುಗಾದಿ ಹಬ್ಬಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಜನರು ಅಗತ್ಯ ವಸ್ತುಗಳ ಖರೀದಿ ಮತ್ತಿತರ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ಇದೇವೇಳೆ ಉಡುಪಿಯಲ್ಲಿರುವ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೋಟೆ, ಕೊಪ್ಪಳ ಮತ್ತಿತರ ಜಿಲ್ಲೆಗಳ ಸಾವಿರಾರು ಕುಟುಂಬಗಳು ಇಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು ಬಹುತೇಕರು ಇಲ್ಲೇ ನೆಲೆ ಕಂಡುಕೊಂಡಿದ್ದಾರೆ. ಇವರೆಲ್ಲ ವರ್ಷದ ಮೂರು ಪ್ರಮುಖ ಹಬ್ಬಗಳಿಗೆ ಊರಿನತ್ತ ಪ್ರಯಾಣ ಬೆಳೆಸುವುದು ವಾಡಿಕೆ.

ನಾಳೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಇವರೆಲ್ಲ ಊರಿನತ್ತ ಹೊರಟಿದ್ದು ಬಸ್ ನಿಲ್ದಾಣ ದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಹಬ್ಬದ ಪ್ರಯುಕ್ತ ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ಗಳನ್ನೂ ಬಿಟ್ಟಿದೆ.