ಉಡುಪಿ: ವ್ಯಕ್ತಿಯೊಬ್ಬರು ಮೊಬೈಲ್ ವಾಟ್ಸಾಪ್ ನಂಬರಿಗೆ ಬಂದ ಲಿಂಕ್ ಅನ್ನು ಒತ್ತಿದ ಪರಿಣಾಮ ಲಕ್ಷಾಂತರ ರೂ. ಹಣ ಕಳೆದುಕೊಂಡು ಮೋಸ ಹೋದ ಘಟನೆ ನಡೆದಿದೆ.
ಶಿವಳ್ಳಿ ಗ್ರಾಮದ ನಿವಾಸಿ ಕೆ.ಜಯರಾಮ ಕೆ.,ಎಂಬವರ ವಾಟ್ಸಾಪ್ ನಂಬರಿಗೆ ನ.28ರಂದು ಎಪಿಕೆ ಪೈಲ್ ಬಂದಿದ್ದು ಅದನ್ನು ಒತ್ತಿದ ತತ್‌ಕ್ಷಣ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ 3.38, 800 ರೂ. ಅನ್ಯ ಖಾತೆಗೆ ವರ್ಗಾವಣೆಯಾಗಿದೆ.
ರಾತ್ರಿ 8 ಗಂಟೆಗೆ ಹಣ ಕಡಿತಗೊಂಡ ಬಗ್ಗೆ ಮೇಸೆಜ್ ಬಂದಿರುತ್ತದೆ.ವಂಚನೆ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.