ಉಡುಪಿ- ದಕ್ಷಿಣ ಕನ್ನಡ ಉಭಯ ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ತೆರೆ

ಉಡುಪಿ:ದಿನಾಂಕ 14 ಹಾಗೂ 15ನೇ ಡಿಸೆಂಬರ್ 2024ರಂದು ಟೀಮ್ ಡೋಂಟ್ ಲುಕ್ ಬ್ಯಾಕ್ ನ ಸಾರಥ್ಯದಲ್ಲಿ ನಡೆದ “ಬಲ್ಲಾಳ್ ಕಪ್”, ಉಡುಪಿ ಹಾಗೂ ದಕ್ಷಿಣ ಕನ್ನಡ ಉಭಯ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಕ್ರೀಡಾಕೂಟವು ಉಡುಪಿಯ ಕಿನ್ನಿಮೂಲ್ಕಿಯ ವೀರಭದ್ರ ಕಲಾಭವನದಲ್ಲಿ ಅದ್ದೂರಿಯಾಗಿ ನೆರವೇರಿತು.

ಈ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಪಟುವಾದ ಕಮಲಾಕ್ಷ ಬಿ. ರವರು ಉದ್ಘಾಟಿಸಿದರು.

ಸಮಾರೋಪ ಸಮಾರಂಭದಲ್ಲಿ ಬಲ್ಲಾಳ್ ಕಪ್ ನ ರೂವಾರಿಯಾಗಿರುವ ಮುರುಳೀಧರ ಬಲ್ಲಾಳ್ ರವರು ಪವರ್ ಲಿಫ್ಟಿಂಗ್ ಇಂಡಿಯಾದ ಅಧ್ಯಕ್ಷರಾದ ಸತೀಶ್ ಕುಮಾರ್ ಕುದ್ರೋಳಿ ರವರನ್ನು ಸನ್ಮಾನಿಸಿದರು.

ಇದರೊಂದಿಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಹಿರಿಯ ಹಾಗೂ ಕಿರಿಯ ಪವರ್ ಲಿಫ್ಟಿಂಗ್ ಪಟುಗಳು ಮತ್ತು ಪವರ್ ಲಿಫ್ಟಿಂಗ್ ಕೋಚ್ ಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು, ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ರವರು, ಮಹಾಕಾಳಿ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ನ ಮಾಲೀಕರಾದ ಶಕ್ತಿ ಸಿಂಗ್ ರಾಥೋಡ್ ರವರು, ಜಯರಾಮ್ ರವರು, ಕೃಷ್ಣಮೂರ್ತಿ ಆಚಾರ್ಯರವರು, ನವೀನ್ ಶೆಟ್ಟಿಯವರು, ಜಾನ್ಸನ್ ಅರುಣ್ ಡಿಸೋಜಾ ರವರು, ವಿಟ್ಟಲ್ ಶೆಟ್ಟಿಗಾರ್ ರವರು, ರವಿ ಶೆಟ್ಟಿಗಾರ್ ರವರು, ಶ್ರೀಕಾಂತ್ ಕೆ ರವರು, ಕಾರ್ತಿಕ್ ಪೂಜಾರಿಯವರು, ಚೇತನ್ ಕುಮಾರ್ ರವರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈ ಕ್ರೀಡಾಕೂಟದ ಪುರುಷರ ವಿಭಾಗದ ಟೀಮ್ ಚಾಂಪಿಯನ್ ಶಿಪ್ ನ ಟ್ರೋಫಿಯನ್ನು ಮಂಗಳೂರಿನ ಪ್ರಖ್ಯಾತ ಬಾಲಾಂಜನೇಯ ಜಿಮ್ನಾಶಿಯಂ ಮುಡಿಗೇರಿಸಿಕೊಂಡಿತು. ಹಾಗೂ ರನ್ನರ್ ಆಫ್ ಟ್ರೋಫಿಯನ್ನು ಸಾಲಿಗ್ರಾಮದ ರಾ ಫಿಟ್ನೆಸ್ ಟೀಮ್ ಮುಡಿಗೇರಿಸಿಕೊಂಡಿತು.

ಈ ಕ್ರೀಡಾಕೂಟದ ಪುರುಷರ ವಿಭಾಗದ ಸ್ಟ್ರಾಂಗ್ ಮ್ಯಾನ್/ ಬೆಸ್ಟ್ ಲಿಫ್ಟರ್ ಆಫ್ ಉಡುಪಿ ಮತ್ತು ದಕ್ಷಿಣ ಕನ್ನಡ ಎಂಬ ಬಿರುದನ್ನು ಬಾಲಾಂಜನೇಯ ಜಿಮ್ನಾಶಿಯಂನ ಮಂಜೇಶ್ ಪಿ. ವಿ ರವರು ಮುಡಿಗೇರಿಸಿಕೊಂಡರು. ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಟ್ರಾಂಗ್ ವುಮೆನ್/ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಆಲಿಷ ನೊರೆನ್ಹಾ ರವರು ಗೆದ್ದರು.