ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಶ್ರಾವಣ ಶುಕ್ರವಾರವಾದ ಈ ದಿನ ಉಡುಪಿಯ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ಅದ್ದೂರಿ ಪೂಜೆಗಳು ನಡೆಯುತ್ತಿವೆ. ವರಮಹಾಲಕ್ಷ್ಮಿ ವೃತದ ಜೊತೆಗೆ ದೇವಾಲಯದಲ್ಲಿ ವೈಭವದ ರಂಗ ಪೂಜೆ ಏರ್ಪಡಿಸಲಾಗಿದೆ.
ದೇವಾಲಯವನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ಲಕ್ಷ್ಮಿ ವೆಂಕಟೇಶ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಬರುತ್ತಿದ್ದಾರೆ. ಭಜನಾ ಸಪ್ತಾಹದ ಸಲುವಾಗಿ ಅಖಂಡ ಭಜನಾ ಮಹೋತ್ಸವಗಳು ದೇವಾಲಯದಲ್ಲಿ ನಡೆಯುತ್ತಿದೆ.