ಉಡುಪಿ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ.

ಉಡುಪಿ, ಆ.30: ಇಂದ್ರಾಳಿ ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆಯ ಸನಿಹ ಇರುವ, ಸರಕಾರಿ ಬಾವಿ ಬಳಿ, ಅಪರಿಚಿತ ಗಂಡಸಿನ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆಯು ಶುಕ್ರವಾರ ನಡೆದಿದೆ.

ಶವವು ನೇಣು ಕುಣಿಕೆಯಲ್ಲಿ ಕಂಡುಬಂದಿದ್ದು, ಮೃತಪಟ್ಟು ಹತ್ತು ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳದಲ್ಲಿದ್ದು ನಗರ ಪೋಲಿಸ್ ಠಾಣೆಯ ಎಸ್.ಐ ಪುನೀತ್ ಕುಮಾರ್ ಬಿ.ಇ, ಎ.ಎಸ್.ಐ ಹರೀಶ್, ಜಾಸ್ವ, ಹಾಗೂ ರೈಲ್ವೆ ಆರ್.ಪಿ.ಎಫ್ ಸುಧೀರ್ ಶೆಟ್ಟಿ ಕಾನೂನು ಪ್ರಕ್ರಿಯೆ ನಡೆಸಿದರು. ಕೊಳೆತು ಗಬ್ಬು ವಾಸನೆ ಹೊಡೆಯುತ್ತಿದ್ದ ಕಳೇಬರವನ್ನು ಅಜ್ಜರಕಾಡಿನ ವೈದ್ಯಕೀಯ ಪರೀಕ್ಷಾ ಕೇಂದ್ರ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಇಲಾಖೆಗೆ ಸಹಕರಿಸಿದರು. ಮೃತರ ವಾರಸುದಾರರು ನಗರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.