ಉಡುಪಿ: ಕೊಡವೂರುದ ಜುಮಾದಿಕೋಲ ಆಮಂತ್ರಣ ಬಿಡುಗಡೆ

ಉಡುಪಿ: ಕೊಡವೂರುದ ಜುಮಾದಿಕೋಲ ಇದರ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಇಂದು ಕೊಡವೂರು ಶ್ರೀ ಶಂಕರ ನಾರಾಯಣ ದೇವಾಲಯದಲ್ಲಿ ಪ್ರಾರ್ಥನೆಯೊಂದಿಗೆ ವಸಂತ ಮಂಟಪದಲ್ಲಿ 10-05-2025ರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಂಚ ಧೂಮಾವತಿ ದೈವಸ್ಥಾನ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುಭಾಷ್ ಮೆಂಡನ್ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಭೂ ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷರು ಸಾಧು ಸಾಲಿಯಾನ್, ಭೂ ಸಮರ್ಪಣಾ ಸಮಿತಿಯ ಗೌರವ ಸಲಹೆಗಾರರು ಕಾಪು ಬೂಡು ಅನಿಲ್ ಬಲ್ಲಾಳ್, ಪಂಚ ಧೂಮಾವತಿ ದೈವಸ್ಥಾನ ಇದರ ಆಡಳಿತ ಮಂಡಳಿಯ ಗೌರವಾಧ್ಯಕ್ಷರು ಅಣ್ಣಪ್ಪ ಶೆಟ್ಟಿ, ಪಡ್ಲನೆರ್ಗಿ ನಾಗರಿಕ ಸಮಿತಿ ಅಧ್ಯಕ್ಷರಾದ ಶೇಖರ್ ಪುತ್ರನ್, ಶಂಕರ ನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಾದಿರಾಜ ಸಾಲಿಯನ್ ಶ್ರೀಮತಿ ಶ್ರೀಲಾ ಕೃಷ್ಣ ದೇವಾಡಿಗ, ಕೊಡವೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸತೀಶ್ ಕೊಡವೂರು, ಮತ್ಸೋದ್ಯಮಿ ಮಂಜುನಾಥ ಕೊಳ, ಶ್ರೀ ಪಂಚ ಧೂಮಾವತಿ ದೈವಸ್ಥಾನದ ಭೂ ಸಮರ್ಪಣಾ ಸಮ್ಮತಿಯ ಕಾರ್ಯಾಧ್ಯಕ್ಷರು, ಕೊಡವೂರು ವಾರ್ಡ್ ನಗರಸಭಾ ಸದಸ್ಯ ವಿಜಯ ಕೊಡವೂರು, ಭೂಸಮರ್ಪಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾತ್ ಕೊಡವೂರು, ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶ್ರೀಮತಿ ಶೀಲ ಕೃಷ್ಣ ದೇವಾಡಿಗ, ವೀರ ಮಾರುತಿ ಭಜನಾ ಮಂಡಳಿಯ ಮಾಜಿ ಮಹಿಳಾಸಮಿತಿಯ ಅಧ್ಯಕ್ಷೆ ಶ್ರೀಮತಿ ಹೇಮಲತಾ ರಮೇಶ್ ಸುವರ್ಣ, ಮಾತೃಶ್ರೀ ಮಹಿಳಾ ಮಂಡಲ ಗರ್ಡೇ ಇದರ ಅಧ್ಯಕ್ಷೆ ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು.

ಭೂ ಸಮರ್ಪಣಾ ಸಮಿತಿಯ ಉಪಾಧ್ಯಕ್ಷ ಸಚಿನ್ ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಚಂದ್ರಕಾಂತ್ ಕೊಡವೂರು ವಂದಿಸಿದರು. ಈ ಸಂದರ್ಭದಲ್ಲಿ ದೇವರಾಜ್ ಸುವರ್ಣ, ನಿತ್ಯಾನಂದ ಅಮೀನ್, ಸಂದೇಶ್ ಕೋಟ್ಯಾನ್, ದೀಕ್ಷಿತ್ ದೇವಾಡಿಗ, ಜಯ ಸಾಲಿಯಾನ್ ಜುಮಾದಿನಗರ, ಅಮಿತ್ ಗರಡೆ, ನಾಗರಾಜ್ ಗಾಣಿಗ ತೆಂಕನಡಿಯೂರು, ದಯಾನಂದ ಮೇಸ್ತ್ರಿ ಕೊಡವೂರು, ಕಿಶೋರ್ ಬೈಲಕೆರೆ, ಅಶೋಕ್ ಶೆಟ್ಟಿಗಾರ್ ದೀಪಕ್ ಕೊಡವೂರು ಶ್ರೀಮತಿ ಪ್ರೀತಿ ವಿಜಯ್ ಶ್ರೀಮತಿ ಚಂದ್ರಾವತಿ ಕಾನಂಗಿ ಶ್ರೀಮತಿ ಗೀತಾ ಲಕ್ಷ್ಮೀನಗರ ಶ್ರೀಮತಿ ಸುಶೀಲಾ ಜಯಕರ್ ಶ್ರೀಮತಿ ಶುಭ ಯೋಗೇಶ್ ಹಾಗೂ ಜುಮಾದಿ ನಗರದ ಎಲ್ಲಾ ಕಾರ್ಯಕ್ರಮ, ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತಿರುವ ಧಾರ್ಮಿಕ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.