ಉಡುಪಿ: ಕರಾಟೆ ಬುಡೋಕಾನ್ ಇಂಟರ್ನ್ಯಾಷನಲ್ ಇದರ ವತಿಯಿಂದ ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ (ರಿ) ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಉಡುಪಿ ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮಶಾಲೆ ಇಲ್ಲಿ 2024 ನೇ ಸಾಲಿನ ಕರಾಟೆ ಕಪ್ಪು ಪಟ್ಟಿ ವಿಭಾಗದ ಪರೀಕ್ಷೆಯು ಏ.28ರಂದು ಜರುಗಿತು.
ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ. ಎನ್. ಬಿ. ವಿಜಯ ಬಲ್ಲಾಳ್,ಮುಖ್ಯ ಅತಿಥಿಗಳಾದ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀ ಪ್ರಭಾಕರ್ ಪೂಜಾರಿ, ಯಕ್ಷಗಾನ ಕಲಾಕೇಂದ್ರ ಗುಂಡಿಬೈಲು ಇದರ ಅಧ್ಯಕ್ಷರಾದ ಶ್ರೀ ಬಾಬು ಗೌಡ, ವ್ಯಾಯಾಮಶಾಲೆ ಯ ಅಧ್ಯಕ್ಷರಾದ ಶ್ರೀ ರಾಮದಾಸ್ ಶೆಟ್ಟಿ, ಏಷ್ಯದ ಮುಖ್ಯ ಪರಿವೀಕ್ಷಕರಾದ ಬಿ. ಪರಮೇಶ್ ರವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕರಾದ ಕ್ಯೋಷಿ ರವಿ ಕುಮಾರ್ ಉದ್ಯಾವರ, ಶಿಹಾನ್ ಹರ್ಷ ಭಾಗವತ್, ಶಿಹಾನ್ ಸಚಿನ್ ಪಿತ್ರೋಡಿ, ಶಿಹಾನ್ ಸೋಮನಾಥ್, ಶಿಹಾನ್ ದೀಪಕ್ ಪಿರೇರ, ಡಾ. ಅನೂಪ್ ಪೂಜಾರಿ, ಸೆನ್ಸಾಯಿ ಸೀತಾರಾಮ್ ಪೂಜಾರಿ ಉಪಸ್ಥಿತರಿದ್ದರು. ಸುಮಾರು 35 ಕರಾಟೆ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.