ಉಡುಪಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾಮಾಕ್ಷಿ ಹಾಗೂ ಕಾಲ ಬೈರವ ಸನ್ನಿಧಾನ, ಇಂದ್ರಾಳಿ ಉಡುಪಿ ದೇವಸ್ಥಾನದ ಹೊಸ ಕುಣಿತ ಭಜನ ತಂಡದ ಉದ್ಘಾಟನೆಯು ಗುರು ಪೂರ್ಣಿಮೆಯ ದಿನ ಜು.21 ರಂದು ದೀಪ ಪ್ರಜ್ವಲಿಸುದರ ಮೂಲಕ ಚಾಲನೆ ನೀಡಲಾಯಿತು.

ಗುರುಗಳಾಗಿ ರೋಹಿತ್ ಕಬಿಯಾಡಿ, ಧರ್ಮಸ್ಥಳ ಭಜನ ಪರಿಷತ್ತಿನ ಹಿರಿಯಡ್ಕ ವಲಯದ
ಅಧ್ಯಕ್ಷರು ವಿಜಯ್ ಶೆಟ್ಟಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಭಜನ ಪರಿಷತ್ತಿನ ನಿರೀಕ್ಷಣಾ ಅಧಿಕಾರಿ ರಾಘವೇಂದ್ರ , ಹಿರಿಯಡ್ಕ ವಲಯದ ಕಾರ್ಯದರ್ಶಿ ಪೂರ್ಣಿಮಾ ಹಾಗೂ ತಂಡದ ಸಂಯೋಜಕರಾಗಿ ಚೇತನ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಶಿವಮಯಂ ಚೆಂಡೆ ಬಳಗ ಪೆರ್ಡೂರು ಶ್ರೀ ವಾಸುಕಿ ಸುಬ್ರಮಣ್ಯ ಕುಣಿತ ಭಜನಾ, ಧೂಪದ ಕಟ್ಟೆ
ಶ್ರೀ ಮಹಮಾಯಿ ಕುಣಿತ ಭಜನಾ ತಂಡ, ಪೆರ್ಡೂರು ಇವರಿಂದ ಕುಣಿತ ಭಜನಾ ಹಾಗೂ ಚೆಂಡೆ ವಾದನ ನಡೆಯಿತು.
ಪ್ರಸಿದ್ಧ ನೃತ್ಯ ತಂಡ ಡಾನ್ಸಿಂಗ್ ದಿವಾಜ್ ಡಾನ್ಸ್ ಕ್ರಿವ್ ನ ಸಂಯೋಜಕರು, ಸದಸ್ಯರು ಉಪಸ್ಥಿತರಿದ್ದರು.
 
								 
															





 
															 
															 
															











