ಉಜ್ವಲ ಗ್ಯಾಸ್ ಇದ್ದವರಿಗೆ ಮಾತ್ರ ಆಧಾರ್ ದೃಢೀಕರಣ ಕಡ್ಡಾಯ.

ಉಡುಪಿ: ಅಡುಗೆ ಅನಿಲ ಸಂಪರ್ಕ ಇರುವವರು ಡಿ.31ರೊಳಗೆ ಗ್ಯಾಸ್ ಏಜೆನ್ಸಿಗೆ ಹೋಗಿ ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯ. ಉಳಿದವರಿಗೆ ಗ್ಯಾಸ್ ಸಬ್ಸಿಡಿ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿಲ್ಲ.

ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ.