ಇನ್ನು ಆಧಾರ್ ಕಾರ್ಡಿನಂತೆಯೇ ಬರಲಿದೆ “ಅಪಾರ್ ಕಾರ್ಡ್!ಏನಿದು?

ಎಲ್ಲರೂ ಆಧಾರ್ ಕಾರ್ಡ್ ಕೇಳಿರುತ್ತೇವೆ, ಹೊಂದಿರುತ್ತೇವೆ. ಆದರೆ ಇದ್ಯಾವ್ದು ಹೊಸ ಅಪಾರ್ (APAAR) ಅನ್ನೋದ್ರ ಬಗ್ಗೆ ನೀವು ಯೋಚ್ನೆ ಮಾಡ್ತಿದ್ರೆ ಅದ್ರ ಬಗ್ಗೆ ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ.

ಆಟೋಮೇಟೆಡ್‌ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (APAAR) ಇದು ವಿದ್ಯಾರ್ಥಿಗಳಿಗೆ ನೀಡುವಂತಹಾ ಕಾರ್ಡ್ ಆಗಿದ್ದು, ಇಡೀ ದೇಶದ ವಿದ್ಯಾರ್ಥಿಗಳಿಗೆ 12 ವಿಭಿನ್ನ ಸಂಖ್ಯೆಯ ಕಾರ್ಡ್ ನೀಡಲಾಗತ್ತೆ. ಈ ಕಾರ್ಡ್ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಒಳಗೊಂಡಿರುತ್ತದೆ. ವಿದ್ಯಾರ್ಥಿಯ ಆರಂಭಿಕ ಶಿಕ್ಷಣ ಪ್ರಾರಂಭಗೊಂಡ ಶಾಲೆಯ ವಿವರದಿಂದ ಹಿಡಿದು, ವಿದ್ಯಾರ್ಥಿಯ ಸಾಧನೆ, ಫಲಿತಾಂಶ, ಸ್ಕಾಲರ್ಶಿಪ್ ಮುಂತಾದ ಎಲ್ಲಾ ದಾಖಲೆಗಳೂ ಈ ಮೂಲಕ ದೊರೆಯುತ್ತದೆ.

Oplus_131072

ಈ ಕಾರ್ಡನ್ನು ಆಧಾರ್ ಗೆ ಜೋಡಣೆ ಮಾಡಲಾಗುತ್ತದೆ ಹಾಗೂ ಡಿಜಿ ಲಾಕರ್ ನಲ್ಲೂ ಈ ಕಾರ್ಡ್ ಹೊಂದಬಹುದು. 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೇ ಈ ಕಾರ್ಡ್ ಅನ್ನು ಅಳವಡಿದಿಕೊಂಡಿದ್ದು ಅದರ ಸಮರ್ಪಕ ಅನುಷ್ಟಾನ ಇನ್ನಷ್ಟೇ ಆಗಬೇಕಿದೆ. ಇದರಿಂದ ವಿದ್ಯಾರ್ಥಿಗಳಿಗೂ ತಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಒಂದೆಡೆ ಪಡೆಯಲು ಅನುಕೂಲ ಆಗಿದ್ದು, ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ದಾಖಲಾದಾಗ ವರ್ಗಾವಣೆ ಪತ್ರ ಪಡೆಯಲೂ ಇದೆ ಸಹಕಾರಿ. ನಕಲಿ ದಾಖಲೆಗಳ ಸೃಷ್ಟಿಯನ್ನೂ ಇದರ ಮೂಲಕ ತಡೆಗಟ್ಟಬಹುದಾಗಿದೆ.

ಅಪಾರ್ ಕಾರ್ಡ್ ಮಾಡಲು ವಿದ್ಯಾರ್ಥಿ ಹಾಗೂ ಪೋಷಕರ ಒಪ್ಪಿಗೆಯನ್ನು ಪಡೆದೇ ಮಾಡಲಾಗುತ್ತದೆ‌. ಹಾಗೂ ಇದರಲ್ಲಿನ ದತ್ತಾಂಶಗಳು ಗೋಪ್ಯವಾಗಿರಲಿದೆ ಎಂದು ಸರ್ಕಾರ ತಿಳಿಸಿದೆ. ಅಲ್ಲದೇ ವಿದ್ಯಾರ್ಥಿ ಅಥವಾ ಪೋಷಕರಿಗೆ ಈ ಕಾರ್ಡ್ ಬೇಡ ಎಂದೆನಿಸಿದ ಸಂದರ್ಭದಲ್ಲಿ ತಮ್ಮ ಒಪ್ಪಿಗೆ ಹಿಂಪಡೆದುಕೊಳ್ಳುವ ಸ್ವಾತಂತ್ರ್ಯ ಇದೆ‌.