ಉಡುಪಿ: ಒಂಬತ್ತು, ಹತ್ತು, ಪಿಯುಸಿ, ಸಿಯಿಟಿ, ಜೆಯಿಯಿ, ನೀಟ್ ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್ ವತಿಯಿಂದ ಸಿಯಿಟಿ ಹಾಗೂ ನೀಟ್ ಪರೀಕ್ಷೆಗಳಿಗೆ 25 ದಿನಗಳ ನಿರಂತರ ಕ್ರಾಶ್ ಕೋರ್ಸ್ ತರಬೇತಿಯು ಇದೇ ಬರುವ ಮಾರ್ಚ ತಿಂಗಳಲ್ಲಿ ಆರಂಭವಾಗಲಿದೆ.
ಏಪ್ರಿಲ್ 18,19,20 ರಂದು ಕರ್ನಾಟಕ ಸಿಯಿಟಿ ಪರೀಕ್ಷೆಯು ಜರಗಲಿದೆ. ಹಾಗೆಯೇ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯು ಮಾರ್ಚ 23 ರಂದು ಮುಗಿಯಲಿದೆ. ಪರೀಕ್ಷೆ ಮುಗಿದ ಮರುದಿನ ಮಾರ್ಚ 24 ರಿಂದ ಸಿಯಿಟಿ ಹಾಗೂ ನೀಟ್ ತರಬೇತಿಯು ನಿರಂತರ 25 ದಿನಗಳ ಕಾಲ ಜರಗಲಿದೆ. ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ತರಬೇತಿಯು ಸಾಗಲಿದೆ.
ಸಿಯಿಟಿ ಹಾಗೂ ನೀಟ್ ತರಬೇತಿಯ ಜೊತೆಗೆ ಮಾಹೆ ಪ್ರವೇಶಪರೀಕ್ಷೆ, ನಿಟ್ಟೆಯ ಇಂಜಿನಿಯರಿಂಗ್ ಕಾಲೇಜುಗಳು ಆಯೋಜಿಸುವ ನುಕ್ಯಾಟ್ ಪ್ರವೇಶಪರೀಕ್ಷೆಗೂ ತರಬೇತಿಯನ್ನು ಆಯೋಜಿಸಲಾಗುತ್ತಿದೆ.
ಫ್ಯಿಸಿಕ್ಸ್ ಕೆಮಿಸ್ಟ್ರಿ, ಮಾಥ್ಸ್ ಹಾಗೂ ಬಯೋಲಾಜಿಯಲ್ಲಿ ಪ್ರಸಿದ್ಧಿ ಪಡೆದಿರುವ ಪ್ರತಿಭಾನ್ವಿತ ಪ್ರಾಧ್ಯಾಪಕರ ತಂಡವು ವಿಜ್ಞಾನ ವಿಭಾಗದ ಪರಿಷ್ಕೃತ ಮಾಹಿತಿಗಳೊಂದಿಗೆ ತರಬೇತಿಯನ್ನು ನೀಡಲಿದೆ.
ತರಬೇತಿಯ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಅತೀನಿರೀಕ್ಷಿತ ಪ್ರಶ್ನೋತ್ತರ ಪತ್ರಿಕೆಗಳೊಂದಿಗೆ ತರಗತಿಗಳು ಜರಗಲಿದ್ದು ಮಾದರಿಪರೀಕ್ಷೆ ಹಾಗೂ ಪ್ರಸಿದ್ಧ ಪ್ರಕಾಶಕರುಗಳ ಕೃತಿಗಳು ಆಚಾರ್ಯಾಸ್ ಏಸ್ ಸಂಸ್ಥೆಯ ಗ್ರಂಥಾಲಯದಲ್ಲಿ ಲಭಿಸಲಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ಆಚಾರ್ಯಾಸ್ ಏಸ್ ಸಂಸ್ಥೆಯು ಆಯೋಜಿಸಿದ ಸಿಯಿಟಿ, ನೀಟ್ ಕ್ರಾಶಕೋರ್ಸ್ ನಲ್ಲಿ ತರಬೇತಿ ಪಡೆದ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪ್ರಸಿದ್ಧ ಮೆಡಿಕಲ್, ಪಾರಾ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ. ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವೈದ್ಯರಾಗಿ, ಇಂಜಿನೀಯರಾಗಿ ದೇಶದ ವಿವಿದೆಡೆ ಸುಮಾರು 10ವಿದ್ಯಾರ್ಥಿಗಳು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರವೇಶ ಪರೀಕ್ಷೆಗಳ ಜೊತೆಗೆ ಒಂಬತ್ತು, ಹಾಗೂ ಹತ್ತನೇ ತರಗತಿಯ ಸಿ.ಬಿ.ಎಸ್.ಯಿ, ಸ್ಟೇಟ್ ಹಾಗೂ ಐ.ಸಿ.ಯಸ್.ಯಿ ವೆಕೇಶನ್ ಬಾಚ್ ಪ್ರತ್ಯೇಕವಾಗಿ ಜರಗಲಿದ್ದು ಮಾರ್ಚಲ್ಲಿ ತರಗತಿಗಳು ಆರಂಭವಾಗಲಿದೆ. ಪಿಯುಸಿ ವೆಕೇಶನ್ ಬಾಚ್ ಮಾರ್ಚ ಮೊದಲವಾರದಿಂದ ಆರಂಭವಾಗಲಿದೆ. ಈಗಾಗಲೇ ನೋಂದಣಿಯೂ ಆರಂಭವಾಗಿದೆ.
ಆಸಕ್ತರು ಫೆಬ್ರವರಿ 10ನೇ ತಾರೀಖಿನ ಒಳಗೆ ಉಡುಪಿ ತೆಂಕಪೇಟೆ, ಶ್ರೀವೆಂಕಟ್ರಮಣ ದೇವಾಲಯದ ಮುಂಭಾಗದ ರಾಧೇಶ್ಯಾಂ ಕಟ್ಟಡದ ಮೊದಲ ಮಹಡಿಯಲ್ಲಿರುವ ಏಸ್ ಕಚೇರಿಯನ್ನು ಸಂಪರ್ಕಿಸಬೇಕೆಂದು ಏಸ್ ಸಂಸ್ಥೆಯ ನಿರ್ದೇಶಕ ಪಿ.ಅಕ್ಷೋಭ್ಯ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 9901420714 ಅಥವಾ 08204299111 ಮೊಬೈಲ್ ಗೆ ಸಂಪರ್ಕಿಸಬಹುದು.