ತೋಟಗಾರಿಕಾ ಇಲಾಖೆ ವತಿಯಿಂದ 2024-25 ಸಾಲಿನ ಜಿಲ್ಲಾ ಪಂಚಾಯಿತಿ ಪ್ರಚಾರ ಸಾಹಿತ್ಯ ಯೋಜನೆ ಅಡಿ ಉಪ್ಪು ರು ಗ್ರಾಮ ಪಂಚಾಯಿತಿಯ ಅಮ್ಮುಂಜೆ ವ್ಯಾಪ್ತಿಯ ಶ್ರೀಯುತ ಪ್ರಭಾಕರ್ ಪೂಜಾರಿ, ಅಮ್ಮುಂಜೆ, ಉಪ್ಪುರು ರವರ ತೆಂಗು ಹಾಗೂ ಅಡಿಕೆ ತೋಟದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತಂತೆ ಬುಧವಾರ ಬೆಳಿಗ್ಗೆ 10:30ಕ್ಕೆ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಯಿತು.
ಕ್ಷೇತ್ರೋತ್ಸವದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀಮತಿ ಗಾಯತ್ರಿರವರು ವಹಿಸಿ ಉದ್ಘಾಟನೆಯನ್ನು ನೆರವೇರಿಸಿದರು.
ಕ್ಷೇತ್ರೋತ್ಸವದ ಕುರಿತಂತೆ ಪ್ರಾಸ್ತಾವಿಕ ಭಾಷಣವನ್ನು ಶ್ರೀಯುತ ಎಲ್ ಹೇಮಂತ್ ಕುಮಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,ಜಿಲ್ಲಾ ಪಂಚಾಯಿತಿ, ಉಡುಪಿ ರವರು ಮಾಡಿದರು.
ಶ್ರೀಯುತ Dr ರಾಹುಲ್ ಪಾಟಕ್, ಸಹ ಪ್ರಾಧ್ಯಾಪಕರು ಶಿಬಿರಾರ್ಥಿಗಳಿಗೆ ಅಡಿಕೆ ಹಾಗೂ ತೆಂಗು ಬೆಳೆಗಳಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದರು.ಕ್ಷೇತ್ರೋತ್ಸವದ ಕಾರ್ಯಾಗಾರದಲ್ಲಿ ಪ್ರಗತಿಪರ ರೈತರಾದ ಶ್ರೀಯುತ ಪ್ರಭಾಕರ್ ಪೂಜಾರಿ ಹಾಗೂ ಶ್ರೀಯುತ ಭಾಸ್ಕರ್ ಶೆಟ್ಟಿ ಹಾಜರಿದ್ದರು.
ಉಪ್ಪುರು ಗ್ರಾಮ ಪಂಚಾಯಿತಿಯ ಕೃಷಿ ಸಖಿ ಯಾದ ಶ್ರೀಮತಿ ಮಂಜುಳಾ ರವರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಯಾದ ಶ್ರೀ ಮತಿ ವಿಜಯಲಕ್ಷ್ಮಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಮತ್ತಿತರು ಹಾಜರಿದ್ದರು.
ಉಪ್ಪುರು ಗ್ರಾಮ ಪಂಚಾಯಿತಿಯ ರೈತರು ಹಾಗೂ ಅಕ್ಕಪಕ್ಕ ಗ್ರಾಮ ಪಂಚಾಯಿತಿಯ ಕೃಷಿ ಸಚಿವರು ಹಾಜರಿದ್ದು ಕ್ಷೇತ್ರೋತ್ಸವದ ಸದುಪಯೋಗ ಪಡೆದುಕೊಂಡರು.
ಶ್ರೀಯುತ ರಾಹುಲ್ ನಾಸಿಪುಡಿ, ಸಹಾಯಕ ತೋಟಗಾರಿಕಾ ಅಧಿಕಾರಿ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗಳೊಂದಿಗೆ ಮುಕ್ತಾಯಗೊಳಿಸಿದರು.