ಮಿಜೋರಾಂ ಚುನಾವಣಾ ಫಲಿತಾಂಶ: ಆರಂಭಿಕ ಎಣಿಕೆಯಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಮುನ್ನಡೆ

ಐಜ್ವಾಲ್: ನವೆಂಬರ್ 7 ರಂದು ಮಿಜೋರಾಂನಲ್ಲಿ 40 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯ ಮತಎಣಿಕೆಯ ಫಲಿತಾಂಶಗಳಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 27 ಸೀಟುಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಮಿಜೋ ನ್ಯಾಷನಲ್ ಫ್ರಂಟ್ (MNF) 10 ಸೀಟುಗಳಲ್ಲಿದ್ದರೆ ಬಿಜೆಪಿ 2 ಸೀಟು ಪಡೆದಿದೆ.

2023 ರ ಮಿಜೋರಾಂ ಚುನಾವಣೆಯು ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದ್ದು ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಗುರಿಯನ್ನು ಹೊಂದಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ ಸದ್ಯದ ಸ್ಥಿತಿಯಲ್ಲಿ ಹಿನ್ನಡೆಯುತ್ತಿದೆ.