ಪ್ರತಾಪ್ ಶೆಟ್ಟಿ ಬೈಲೂರು, ಕಾರ್ಕಳ ಬೈಲೂರಿನ ನೀರೆ ಗ್ರಾಮದವರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ಇಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಇವರಿಗೆ ನೃತ್ಯ, ನಟನೆ, ಸಂಗೀತ ಅಂದರೆ ಆಸಕ್ತಿ. ಶಾರ್ಟ್ ಮೂವಿಯಲ್ಲಿಯೂ ಅಭಿನಯಿಸಿದ್ದಾರೆ. ಸಮಯಸಿಕ್ಕಾಗ ಕ್ಯಾಮರಾ ಹಿಡಿದು ಫೋಟೋ ಕ್ಲಿಕ್ಕಿಸುತ್ತಾರೆ. ಇವರ ಚಿತ್ರಗಳಲ್ಲಿ ಉಡುಪಿಯ ಸಂಸ್ಕೃತಿ, ಜನ ಜೀವನ, ಸಾಂಪ್ರಾದಾಯಿಕ ಹುಲಿವೇಷಗಳೆಲ್ಲಾ ವಿಶೇಷವಾಗಿ ಕ್ಲಿಕ್ಕಾಗಿವೆ.