ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ನಿರುದ್ಯೋಗಿ ಯುವಕರಿಗೆ ಆರ್ಥಿಕ ಸಹಾಯ ನೀಡುವ ಯುವನಿಧಿ ಯೋಜನೆ ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು ವರದಿ ಹೇಳಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದೆ.
ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಸಮೀಪದ ಆನ್‌ಲೈನ್ ಸೆಂಟರ್‌ಗಳಿಗೆ ತೆರಳಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವೇ ಖುದ್ದಾಗಿಯೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಪರಿಶೀಲನೆ ಬಳಿಕ ಅರ್ಹರಿಗೆ 2024 ರ ಜನವರಿ ತಿಂಗಳಿನಿಂದ ಯುವನಿಧಿ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಬರಲಿದೆ.
ಪ್ರಸಕ್ತ ವರ್ಷ ಪದವಿ, ಡಿಪ್ಲೊಮಾ ಮುಗಿಸಿದವರಲ್ಲಿ ಸುಮಾರು 5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದು, ಅವರು ತಮ್ಮ ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪತ್ರ, ನಿರುದ್ಯೋಗಿಯಾಗಿರುವ ಬಗ್ಗೆ ನೋಟರಿಯಿಂದ ಪ್ರಮಾಣ ಪತ್ರ ಇಲ್ಲವೇ ಸ್ವಯಂ ದೃಢೀಕರಣ ಪತ್ರ ಸಲ್ಲಿಸಲು ಅವಕಾಶವಿದೆ.
ನಿಬಂಧನೆಗಳು:
> ಪದವಿ ಇಲ್ಲವೇ ಡಿಪ್ಲೊಮಾ ಮುಗಿಸಿ ಆರು ತಿಂಗಳು ಕಳೆದರೂ ಉದ್ಯೋಗ ಲಭಿಸಿದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.
>2023ರ ಸಾಲಿನಲ್ಲಿ ಉತ್ತೀರ್ಣಯಾದವರು ಅರ್ಜಿ ಸಲ್ಲಿಸಲು ಅರ್ಹರು.
>ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಈ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ.
>ಭತ್ಯೆಯನ್ನು ನೇರ ಬ್ಯಾಂಕ್ ಖಾತೆಗೆ( DBT) ವರ್ಗಾವಣೆ ಮಾಡಲಾಗುತ್ತದೆ.
>ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
>ನಿರುದ್ಯೋಗಿಗಳು ಎನ್ನುವುದಕ್ಕೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಸರಿಯಾದ ಮಾಹಿತಿ ಘೋಷಿಸಲು ವಿಫಲವಾಗುವವರಿಗೆ ದಂಡ ವಿಧಿಸಲಾಗುತ್ತದೆ.
ಯೋಜನೆಗೆ ಅನರ್ಹರು:
>ಉನ್ನತ ವ್ಯಾಸಂಗಕ್ಕೆ ದಾಖಲಾಗಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸಿದವರು.
>ಶಿಶುಕ್ಷು(Apprentice) ವೇತನವನ್ನು ಪಡೆಯುತ್ತಿರುವವರು.
>ಸರ್ಕಾರಿ ಇಲ್ಲವೇ ಖಾಸಗಿ ವಲಯದಲ್ಲಿ ಈಗಾಗಲೆ ಉದ್ಯೋಗ ಪಡೆಯುತ್ತಿರುವವರು.
>ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು.
ಸಹಾಯಧನ ಪ್ರಮಾಣ:
ಪದವೀಧರ ನಿರುದ್ಯೋಗಿಗಳು ಹಾಗೂ ವೃತ್ತಿಪರ ಕೋರ್ಸ್ ಮುಗಿಸಿದ ಯುವಕರಿಗೆ 3000 ರೂ. ಮಾಸಿಕ ಭತ್ಯೆ ಸಿಗಲಿದೆ.
ಇದೇ ಅವಧಿಯಲ್ಲಿ ಡಿಪ್ಲೋಮಾ ಪಾಸಾಗಿ ಉದ್ಯೋಗ ಸಿಗದವರಿಗೆ 1500 ರೂ. ನಿರುದ್ಯೋಗ ಮಾಸಿಕ ಭತ್ಯೆ ಸಿಗಲಿದೆ.
ಯುವನಿಧಿಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : https://sevasindhu.karnataka.gov.in