ಉಡುಪಿ : ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದಡಿ ನೆಹರು ಯುವ ಕೇಂದ್ರವು ಜಿಲ್ಲೆಗೆ 2019-20 ನೇ ಸಾಲಿಗೆ ರಾಷ್ಟ್ರೀಯ ಯುವ ಕಾರ್ಯಕರ್ತರ ಯೋಜನೆಯಡಿ ಯುವ ಕಾರ್ಯಕರ್ತರನ್ನು ಪ್ರತಿ ತಾಲೂಕಿಗೆ ಇಬ್ಬರಂತೆ (ಉಡುಪಿಯ 7 ತಾಲೂಕುಗಳಿಗೆ) ಒಟ್ಟು 14 ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಿದೆ. ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಹತೆ ಹೊಂದಿರುವ 29 ವರ್ಷದೊಳಗಿನ ಯುವಕ –ಯುವತಿಯರು ನೇಮಕಾತಿಗೆ ಅರ್ಹರು. ನೇಮಕಗೊಂಡ ಅಭ್ಯರ್ಥಿಗಳಿಗೆ 5,000 ರೂ. ಮಾಸಿಕ ಗೌರವಧನವನ್ನು ನೀಡಲಾಗುವುದು.
ನೇಮಕಾತಿಯ ನೇರ ಸಂದರ್ಶನವು ಜೂನ್ 27 ರಂದು ಬೆಳಗ್ಗೆ 10.30 ಕ್ಕೆ ನೆಹರು ಯುವ ಕೇಂದ್ರ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದ ಹತ್ತಿರ, ಜಿಲ್ಲಾಧಿಕಾರಿ ಕಛೇರಿ ಆವರಣ, ರಜತಾದ್ರಿ, ಮಣಿಪಾಲ, ಉಡುಪಿಯಲ್ಲಿ ನಿಗದಿಪಡಿಸಲಾಗಿದ್ದು, ಆಸಕ್ತಿ ಹಾಗೂ ಅರ್ಹತೆ ಇರುವ ಅಭ್ಯರ್ಥಿಗಳು ವಿದ್ಯಾರ್ಹತೆ, ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಸೈಜ್ ಪೋಟೋ ಹಾಗೂ ಇತರ ದಾಖಲೆಯ ಮೂಲ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820- 2574992 ಅನ್ನು ಸಂಪರ್ಕಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












