ಶಿರ್ವ ಸಂತಮೇರಿ ಕಾಲೇಜಿನಲ್ಲಿ ಯುವ ಸೇನಾ ವಾರ್ಷಿಕ ತರಬೇತಿ ಶಿಬಿರ

ಶಿರ್ವ: ಇಲ್ಲಿನ ಸಂತ ಮೇರಿ ಕಾಲೇಜಿನ ರಾಷ್ಟ್ರೀಯ ಭೂಯುವಸೇನಾ ದಳದ ಎನ್.ಸಿ.ಸಿ.ಘಟಕದ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್‍ಕುಮಾರ್ ನೇತೃತ್ವದಲ್ಲಿ ಐದು ದಿನಗಳ ವಾರ್ಷಿಕ ತರಬೇತಿ ಶಿಬಿರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಮಾತನಾಡಿ, ಯುವಕರು ಇಂತಹ ಕ್ಯಾಂಪ್ ಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯ. ಹೊಸ ರೀತಿಯ ಕಲಿಕೆ, ಬದುಕಿನ ಹೊಂದಾಣಿಕೆಯನ್ನು ಪರಸ್ಪರ ತಿಳಿಸಿಕೊಡುತ್ತದೆ. ಭವಿಷ್ಯದಲ್ಲಿ ಉನ್ನತ ವಿದ್ಯಾಭ್ಯಾಸ, ಉದ್ಯೋಗ ಪಡೆಯಲು ಪೂರಕವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿ ಘಟಕದ ಹವಾಲ್ದಾರ್ ಸೋನಮ್ ಕೊಂಚಾಕ್, ಪಿಶಾಲ್ ಬದ್ರಿತಮಂಗ್ ಭೂಯುವ ಸೇನಾದಳದ ಕೆಡೆಟ್‍ಗಳನ್ನು ಎನ್.ಸಿ.ಸಿ.ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜೊತೆಗೆ ಕವಾಯತು, ಭೂಪಟ ಅಧ್ಯಯನ, ಫೈರಿಂಗ್‍ಅಣಕುಯುದ್ಧ, ಶಸ್ತ್ರಗಳನ್ನು ಹೇಗೆ ನಿರ್ವಹಣೆ ಮಾಡುವುದು ಎಂಬುವುದರ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.

21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿ ಘಟಕದ ಕಮಾಂಡಿಂಗ್ ಆಫೀಸರ್ ಕರ್ನಲ್ ಬದ್ರಿಪ್ರಸಾದ್, ಹಳೆಯ ಕ್ಯಾಡ್ಗಳಾದ ಜಾಕ್ಸನ್ ಫ್ರಾನ್ಸಿಸ್ ಕ್ಯಾಬ್ರಲ್, ಗೋಡ್ವಿನ್ ಮೋನಿಸ್ ಗ್ಯಾಬ್ರಲ್,ಸೆರಾ ಮಾತೆ ಮಕ್ವನ್ ಈ ತರಬೇತಿಗೆ ಸಂಪೂರ್ಣ ಸಹಕಾರವನ್ನು ನೀಡಿದರು.

ಸಾಜೆರ್ಂಟ್ ಮೇಜರ್ ಪ್ರತೀಮಾ ಆಚಾರ್ಯ ಪ್ರಾರ್ಥಿಸಿದರು. ಸಾಜೆರ್ಂಟ್ ರೈನಾ ಅಂದ್ರಾದೆ ಸ್ವಾಗತಿಸಿದರು. ಜೂನಿಯರ್ ಅಂಡರ್ ಆಫೀಸರ್ ಪ್ರವಿತಾ ಆಚಾರ್ಯ ವಂದಿಸಿದರು. ಕಾರ್ಪರಲ್ ರಿಯೋನ್ ರಿಷಿ ಅಲ್ಫೊನ್ಸೊ ಕಾರ್ಯಕ್ರಮ ನಿರೂಪಿಸಿದರು.