ಉಡುಪಿ: ಯುವ ಚೇತನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಕುಂಜಿಬೆಟ್ಟಿನ ಎ.ವಿ. ಆರ್ಕೇಡ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಶ್ವಿನಿ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅನಂತರ ಮಾತನಾಡಿದ ಅವರು ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಯತ್ತ ಸಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 27 ಕೋಟಿ ರೂ. ವ್ಯವಹಾರ ನಡೆಸಿ 1.85 ಲಕ್ಷ ರೂ. ಲಾಭ ಗಳಿಸಿರುವುದು ಸಂತಸದ ಬೆಳವಣಿ ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರ ಸಹಕಾರದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಸಾಗಬೇಕಾಗಿದೆ ಎಂದರು.
ಉಪಾಧ್ಯಕ್ಷ ಶ್ರೀನಿವಾಸ್ ನಾಯ್ಕ, ನಿರ್ದೇಶಕರಾದ ವಾಸು ಮೂಲ್ಯ, ಹರಿಪ್ರಸಾದ್ ಶೆಟ್ಟಿ ಸುರೇಶ್ ದೇವಾಡಿಗ, ಶಕುಂತಳಾ, ಸಂತೋಷ್ ಕುಮಾರ್, ಅವಿನಾಶ್ ಕುಮಾರ್, ಶಿವಾನಂದ ಅಮೀನ್, ವಿನೋದ್ ಶೇಟ್, ಸದಾನಂದ ಕೋಟ್ಯಾನ್, ಉಷಾ ಕುಮಾರಿ, ಸಲಹಾ ಸಮಿತಿ ಸದಸ್ಯರಾದ ಸುಕೇಶ್ ಶೆಟ್ಟಿ ಹಾಗೂ ಸಿಬಂದಿ ವರ್ಗ ಮತ್ತು ನಿತ್ಯನಿಧಿ ಸಂಗ್ರಾಹಕರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಲಾಲ್ ವಾರ್ಷಿಕ ಲೆಕ್ಕಪರಿಶೋಧನ ವರದಿ ಮಂಡಿಸಿದರು. ಶಾಖಾಧಿಕಾರಿ ವಿನಯ ಸ್ವಾಗತಿಸಿದರು. ಸಲಹಾ ಸಮಿತಿ ಸದಸ್ಯ ವಿನೋದ್ ರಾಜ್ ನಿರೂಪಿಸಿ ವಂದಿಸಿದರು.















