ಧರ್ಮಸ್ಥಳ: ಧರ್ಮಸ್ಥಳದ ಪಾಂಗಳ ಎನ್ನುವ ಪ್ರದೇಶದಲ್ಲಿ ಯೂಟ್ಯೂಬರ್ ಗಳ ಮೇಲೆ ಸ್ಥಳೀಯ ವ್ಯಕ್ತಿಗಳು ಹಲ್ಲೆ ನಡೆಸಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಒಂದಷ್ಟು ವ್ಯಕ್ತಿಗಳು ಯುಟ್ಯೂಬರ್ ಗಳಿಗೆ ಧಮ್ಕಿ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುಟ್ಯೂಬರ್ ಗಳು ವಿಡಿಯೋ ತೆಗೆಯುವ ಕರ್ತವ್ಯ ನಿರ್ವಹಿಸುತ್ತಿದ್ದಾಗ,ಸ್ಥಳಕ್ಕೆ ಆಗಮಿಸಿದ ಒಂದಷ್ಟು ವ್ಯಕ್ತಿಗಳು ಯುಟ್ಯೂಬರ್ ಗಳನ್ನು ನಿಂದಿಸಿದ್ದಾರೆ.ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಒಂದಷ್ಟು ವ್ಯಕ್ತಿಗಳು ಯುಟ್ಯೂಬರ್ ಗಳ ವಿಡಿಯೋ ಕ್ಯಾಮರಾಗಳನ್ನು ಕೂಡ ಪುಡಿಗೈದಿದ್ದಾರೆ. ಯೂಟ್ಯೂಬರ್ ಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ನೂರಾರು ಜನರು ಸೇರಿ ಪರಿಸ್ಥಿತಿ ಸರಿಯಾಗಿ ನಿಭಾಯಿಸದ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಹಲ್ಲೆಗೊಳಗಾದ ಯೂಟ್ಯೂಬರ್ ಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












