ಶ್ರೀ ಕೃಷ್ಣಜನ್ಮಾಷ್ಟಮಿಯಂದು ವೇಷ ಧರಿಸಿ 10 ಲಕ್ಷ ರೂ ಸಂಗ್ರಹಿಸಿ ಬಡ ಕುಟುಂಬಕ್ಕೆ ನೆರವಾದ ಯೂಟ್ಯೂಬರ್ ಸಚಿನ್ ಶೆಟ್ಟಿ ತಂಡ

ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಚಂದ್ರ ನಾಯ್ಕ್ ಎಂಬವರ ಮಗಳು ಹತ್ತು ವರ್ಷದ ಸಾನ್ವಿ ಥಲೇಸೀಮಿಯಾ ಮೇಜರ್ ಎನ್ನುವ ರೋಗದಿಂದ ಬಳಲುತ್ತಿದ್ದು, ಈಕೆಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆ ಅಗತ್ಯವಿದ್ದು, ಇದಕ್ಕೆ 40 ಲಕ್ಷ ರೂ ಖರ್ಚಾಗುವ ಸಾಧ್ಯತೆ ಇದೆ. ಸಾನ್ವಿ ಪಾಲಕರು ತೀರಾ ಬಡವರಾಗಿರುವುದರಿಂದ ಇಷ್ಟೊಂದು ದೊಡ್ಡ ಮೊತ್ತ ಹೊಂದಿಸುವುದು ಅವರಿಂದ ಸಾಧ್ಯವಿಲ್ಲವೆಂದು ತಿಳಿದು, ಆಕೆಯ ಚಿಕಿತ್ಸೆಗೆ ಹಣ ಹೊಂದಿಸುವ ಸಲುವಾಗಿ ಷಟರ್ ಬಾಕ್ಸ್ ಫಿಲ್ಮ್ಸ್ ಖ್ಯಾತಿಯ ಯೂಟ್ಯೂಬರ್ ಸಚಿನ್ ಶೆಟ್ಟಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷ ಧರಿಸಿ 10 ಲಕ್ಷ ರೂಗಳನ್ನು ಸಂಗ್ರಹಿಸಿ ಬಾಲಕಿಯ ಕುಟುಂಬಕ್ಕೆ ನೀಡಿದ್ದಾರೆ.

ಕೃಷ್ಣಾಷ್ಟಮಿಯಂದು ಯಕ್ಷಗಾನ ವೇಷ ಧರಿಸಿ ಒಂದೇ ದಿನದಲ್ಲಿ ಹತ್ತು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಸಾನ್ವಿ ಕುಟುಂಬಕ್ಕೆ ನೆರವು ನೀಡಿದ್ದಾರೆ.

ಇವರ ಈ ಕಾರ್ಯದಲ್ಲಿ ಸುದೀಪ್ ಶೆಟ್ಟಿ, ಚೇತನ್ ಶೆಟ್ಟಿ ಮತ್ತು ನಿತೀಶ್ ಪೂಜಾರಿ ಸಾಥ್ ನೀಡಿದ್ದಾರೆ.