ನಿಮ್ಮ ಅಕ್ಕ ಗೌರಿ ಲಂಕೇಶ್ ಡ್ರಗ್ಸ್ ಅಡಿಕ್ಟ್ ಆಗಿದ್ದರು; ಆಗ ನೀವು ಎಲ್ಲಿಗೆ ಹೋಗಿದ್ರಿ?. ಮುತಾಲಿಕ್ ಪ್ರಶ್ನೆ

ಹಾವೇರಿ: ಇಂದ್ರಜಿತ್ ಲಂಕೇಶ್ ಅವರ ಅಕ್ಕ ಗೌರಿ ಲಂಕೇಶ್ ಅವರು ಕೂಡ ಡ್ರಗ್ ಅಡಿಕ್ಟ್ ಆಗಿದ್ದರು. ಆಗ ನೀವೆಲ್ಲಿ ಹೋಗಿದ್ರಿ?. ಅವಳನ್ನ ಯಾಕೆ ಸುಧಾರಿಸಲಿಲ್ಲ?. ಈಗ ಚಿತ್ರರಂಗದ ಬಗ್ಗೆ ಮಾತನಾಡುತ್ತಿರುವ ನೀವು, ಆಗ ಯಾಕೆ ಮಾತನಾಡಲಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಾತನಾಡಿದ ಅವರು, ಇಂದ್ರಜಿತ್ ದೊಡ್ಡ ಹೀರೋ ಆಗಲು ಹೊರಟಿದ್ದಾರೆ. ಈಗ ಸತ್ತಂತಹ ವ್ಯಕ್ತಿಯ ಹೆಸರು ತೆಗೆದುಕೊಳ್ಳುವ ಅಗತ್ಯವಿರಲಿಲ್ಲ. ಸರ್ಜಾ ಕುಟುಂಬದವರು ಶುದ್ಧವಾಗಿದ್ದಾರೆ. ಅವರನ್ನ ಯಾಕೆ ತರ್ತೀರಿ? ಎಂದು ಇಂದ್ರಜಿತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಇದ್ದಾರೆ. ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲದೆ ಡ್ರಗ್ ಮಾಫಿಯಾ ಸಾಧ್ಯವೇ ಇಲ್ಲ. ಪೊಲೀಸರಿಗೆ ಇದರ ಬಗ್ಗೆ ಎಲ್ಲವೂ ಗೊತ್ತಿರುತ್ತೆ. ಆದರೆ ದುಡ್ಡು, ಭ್ರಷ್ಟಾಚಾರ, ರಾಜಕೀಯ ಒತ್ತಡದಿಂದ ಬಾಯಿ ಬಂದ್ ಮಾಡ್ತಾರೆ. ಈಗ ಪೊಲೀಸರು ಮತ್ತು ರಾಜಕಾರಣಿಗಳು ಇದನ್ನು ಬೇರುಸಹಿತ ಕಿತ್ತು ಹಾಕುತ್ತೇವೆ ಅಂತಾ ಈಗ ಹಾರಾಡ್ತಿದ್ದಾರೆ. ಅದು ಸಾಧ್ಯವೇ ಇಲ್ಲ ಎಂದು ಹೇಳಿದರು.

ಈ ಹಿಂದೆ ಪಬ್ ದಾಳಿ ಆದಾಗಲೆ ಡ್ರಗ್ ಮಾಫಿಯಾ ಬಗ್ಗೆ ಹೇಳಿದ್ದವು. ಅಲ್ಲಿದ್ದವರು ಡ್ರಗ್ ಸೇವನೆ ಮಾಡಿದ್ದರು. ಆದರೆ ಆವತ್ತು ಸರಕಾರ ಅದನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ ನನ್ನನ್ನೆ ಟಾರ್ಗೆಟ್ ಮಾಡಿದರು ಎಂದು ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿಕಾರಿದರು.