ಉಡುಪಿ: ಪ್ರಸ್ತುತ ಕೋವಿಡ್-19 ಸೊಂಕಿನ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತ್ ವತಿಯಿಂದ ಜನವರಿ 21 ರಂದು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಸ್ಫರ್ದೆಯನ್ನು ಮುಂದೂಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಪರ್ಧೆಯ ರಾಜ್ಯ ಸಂಯೋಜಕಿ ಮೀನಾಕ್ಷಿ ಶಿವಾನಂದ ಕುಡಸೋಮಣ್ಣವರ ಮೊ.ನಂ: 7353960666 ಅಥವಾ ಜಿಲ್ಲಾ ಸಂಯೋಜಕರನ್ನು ಸಂಪರ್ಕಿಸುವಂತೆ ರಾಜ್ಯ ವಿಜ್ಞಾನ ಪರಿಷತ್ನ ಗೌರವ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.