ದೀರ್ಘಕಾಲದ ತಲೆ ನೋವು: ಕೆದೂರಿನಲ್ಲಿ ಗೇರು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಕುಂದಾಪುರ: ದೀರ್ಘಕಾಲದ ತಲೆ ನೋವಿನಿಂದ ಬಳಲುತ್ತಿದ್ದ ಯುವಕನೋರ್ವ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ಮೂಡುಕೆದೂರು ಎಂಬಲ್ಲಿ ಜೂ.17 ರಂದು ಮಧ್ಯಾಹ್ನ ನಡೆದಿದೆ.

ಕೆದೂರು ನಿವಾಸಿ 34ವರ್ಷದ ಪ್ರವೀಣ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ.‌ ಈತ ಕುಂದಾಪುರದ ಅರವಿಂದ ಮೋಟಾರ್ಸ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಕಳೆದ 10 ತಿಂಗಳಿನಿಂದ ತಲೆ ನೋವಿನಿಂದ ಬಳಲುತ್ತಿದ್ದನು. ತಲೆ ನೋವಿನಿಂದಾಗಿ ರಾತ್ರಿ ನಿದ್ದೆ ಮಾಡುತ್ತಿರಲಿಲ್ಲ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ.

ಇದೇ ಕಾರಣದಿಂದ ಮನನೊಂದು ಜೂ.17 ರಂದು ಮೂಡು ಕೆದೂರು ರೈಲ್ವೆ  ಬ್ರಿಡ್ಜ್ ಬಳಿಯ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.