ನೀವೂ ಭಾಗಿಯಾಗಿಯಾಗಬಹುದು : ವಾಕ್​-ಇನ್​ನಲ್ಲಿ :ಬಳ್ಳಾರಿ ವಿಮ್ಸ್​ನಲ್ಲಿದೆ ಉದ್ಯೋಗಾವಕಾಶ

ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ (ವಿಮ್ಸ್​​) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ.ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ

ವೈದ್ಯಕೀಯ ಸಂಸ್ಥೆಯಲ್ಲಿ ಖಾಲಿ ಇರುವ ಪ್ರೊಫೆಸರ್​, ಅಸೋಸಿಯೇಟ್​ ಪ್ರೊಫೆಸರ್​, ಮೆಡಿಕಲ್​ ಆಫೀಸರ್​ ಸೇರಿದಂತೆ 93 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಾಕ್​ ಇನ್​ ಇಂಟರ್​ವ್ಯೂ ಮೂಲಕ ಈ ಹುದ್ದೆಗೆ ಆಯ್ಕೆ ನಡೆಯಲಿದೆ ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ.

ಅಧಿಸೂಚನೆ
ಹುದ್ದೆ ವಿವರ: ಒಟ್ಟು 93 ಹುದ್ದೆಗಳ ಭರ್ತಿಗೆ ಮುಂದಾಗಲಾಗಿದೆ. 7 ಪ್ರೊಫೆಸರ್, 23 ಅಸೋಸಿಯೇಟ್ ಪ್ರೊಫೆಸರ್, 57 ಮೆಡಿಕಲ್ ಆಫೀಸರ್ ಮತ್ತು 6 ಅಪಘಾತ ವೈದ್ಯಕೀಯ ಅಧಿಕಾರಿಗಳ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್​ ಪದವಿ ಮತ್ತು ಡಿಎನ್​ಬಿ ಪೂರ್ಣ ಗೊಳಿಸಿರಬೇಕು.

ವಯೋಮಿತಿ: ಹುದ್ದೆ ಅನುಸಾರವಾಗಿ ವಯೋಮಿತಿ ನಿಗದಿಸಲಾಗಿದೆ. ಪ್ರೊಫೆಸರ್​ ಹುದ್ದೆಗೆ 50 ವರ್ಷ ಅಸೋಸಿಯೇಟ್​ ಫೊಫೆಸರ್​ ಹುದ್ದೆಗೆ 45 ವರ್ಷ ಹುದ್ದೆ ಸಹಾಯಕ ಪ್ರಾಧ್ಯಾಪಕರಿಗೆ 38 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ 2000 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಈ ಅರ್ಜಿ ಶುಲ್ಕವನ್ನು ಡಿಮ್ಯಾಂಡ್​ ಡ್ರಾಫ್ಟ್​ನಲ್ಲಿ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ, ಅನುಭವ, ಪಠ್ಯೇತರ, ಎನ್​ಸಿಸಿ ಅಥವಾ ಎನ್​ಎಸ್​ಎಸ್​ ಗ್ರೇಡ್​ ಪ್ರಮಾಣ ಪತ್ರ ಮತ್ತು ಸಂದರ್ಶನದ ಮೂಲಕವಾಗಿ ಆಯ್ಕೆ ಮಾಡಲಾಗುವುದು

ಈ ಹುದ್ದೆಗೆ ಅಭ್ಯರ್ಥಿಗಳು ಆಫ್​ ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಿದ ನಂತರ ಜೂನ್​ 22 ರಂದು ವಾಕ್​ ಇನ್​ ಇಂಟರ್​ವ್ಯೂ ಮೂಲಕ ಅವರ ಆಯ್ಕೆ ನಡೆಯಲಿದೆ. ಬೆಳಗ್ಗೆ 11ರಿಂದ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳು ಹಾಜರಾಗಿರಬೇಕಿದೆ

ಈ ಹುದ್ದೆಗೆ ಆಫ್​ ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಜೂನ್​ 6ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 19 ಆಗಿದೆ. ಅಭ್ಯರ್ಥಿಗಳು ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ಅರ್ಜಿ ಸಮೂನೆಯಲ್ಲಿ ತಮ್ಮ ವಿವರ, ಶೈಕ್ಷಣಿಕ ಮಾಹಿತಿ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮೇಲಿನ ವಿಳಾಸಕ್ಕೆ ನಿಗದಿತ ಅವಧಿಗೂ ಮುನ್ನ ಸಲ್ಲಿಕೆ ಮಾಡಬೇಕಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ವಿವರವಾದ ಅಧಿಕೃತ ಅಧಿಸೂಚನೆ ವೀಕ್ಷಿಸಲು ಈ vims.karnataka.gov.in ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಆಫ್​ಲೈನ್​ ಅರ್ಜಿ ಸಲ್ಲಿಸುವ ವಿಳಾಸ : ನಿರ್ದೇಶಕರ ಕಚೇರಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿಮ್ಸ್​​ ಕ್ಯಾಂಪಸ್, ಕಂಟೋನ್ಮೆಂಟ್, ಬಳ್ಳಾರಿ-583104