ಮೇ 6 ರಂದು ಕಾರ್ಕಳಕ್ಕೆ ಆಗಮಿಸಲಿರುವ ಯೋಗಿ ಆದಿತ್ಯನಾಥ್‌

ಕಾರ್ಕಳ: ಹಿಂದುತ್ವದ ಫಯರ್‌ ಬ್ರಾಂಡ್‌ ಲೀಡರ್‌, ಬಿಜೆಪಿ ಬತ್ತಳಿಕೆಯಲ್ಲಿರುವ ಟ್ರಂಪ್‌ ಕಾರ್ಡ್‌ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕರ್ನಾಟಕದಲ್ಲಿ ಇನ್ನೊಂದು ಸುತ್ತಿನ ಪ್ರಚಾರ ಕೈಗೊಳ್ಳಲಿದ್ದು, ಮೇ. 6ರಂದು ಕಾರ್ಕಳಕ್ಕೆ ಅಗಮಿಸಲಿದ್ದಾರೆ.

ಮೇ 6ರಂದು ಇಡೀ ದಿನ ಯೋಗಿ ಆದಿತ್ಯನಾಥ್‌ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ.ಮೇ 6 ರಂದು ಬೆಳಗ್ಗೆ ಶೃಂಗೇರಿಯಲ್ಲಿ ಪ್ರಚಾರ ಮುಗಿಸಿ ಪುತ್ತೂರಿಗೆ ಆಗಮಿಸಲಿದ್ದಾರೆ. ಅನಂತರ ಬಂಟ್ವಾಳ, ಕಾರ್ಕಳ, ಹೊನ್ನಾವರಕ್ಕೆ ಭೇಟಿ ನೀಡಲಿದ್ದು, ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮಂಗಳೂರು ವಿಭಾಗ ಉಸ್ತುವಾರಿ ಉದಯಕುಮಾರ್‌ ಶೆಟ್ಟಿ ಕಿದಿಯೂರು ತಿಳಿಸಿದ್ದಾರೆ.