ಕೊಡವೂರು ದೇವಸ್ಥಾನದಲ್ಲಿ ಯೋಗ ಶಿವ ನಮಸ್ಕಾರ

ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ವತಿಯಿಂದ ಶಿವರಾತ್ರಿ ಪ್ರಯುಕ್ತ ಯೋಗ ಶಿವ ನಮಸ್ಕಾರ ಮತ್ತು ಅಷ್ಟೋತ್ತರ ಶತನಾಮಾವಳಿ ಪಠಣ, ಬಿಲ್ವಪತ್ರೆ ಮತ್ತು ಪುಷ್ಪಾರ್ಚನೆ ಕೊಡವೂರು ದೇವಳದ ವಠಾರದಲ್ಲಿ ನಡೆಯಿತು.

 

ಕಾರ್ಯಕ್ರಮವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಜಿ. ಕೊಡವೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಷ್ಟೋತ್ತರ ಶತನಾಮಾವಳಿ ಅರ್ಚನೆಯನ್ನು ವಾಸುದೇವ ಭಟ್ ನೆರವೇರಿಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ್ ಕೊಡವೂರು, ರಾಜ ಎ. ಸೇರಿಗಾರ, ಸುಧಾ ಎನ್. ಶೆಟ್ಟಿ, ಬಾಬ ಕೆ. ಮತ್ತು ಎಸ್ಪಿ ವೈಪಿಎಸ್ ಸಮಿತಿಯ ಪ್ರಮುಖ ಶಿಕ್ಷಕಿ ಮಾತೆಯರ ವಿಭಾಗದ ಲಲಿತ ಕೆದ್ಲಾಯ, ಉಡುಪಿ ಜಿಲ್ಲಾ ಸಂಚಾಲಕಿ ಭವಾನಿ ಡಿ. ಭಟ್, ನೇತ್ರಾವತಿ ವಲಯದ ಶಿಕ್ಷಣ ಪ್ರಮುಖ್ ಆರ್. ಜಿ. ಬಿರಾದರ್, ಜಿಲ್ಲಾ ಸಹ ಸಂಚಾಲಕ ಪ್ರವೀಣ್, ಸಂಘಟನಾ ಪ್ರಮುಖ ಶ್ರೀನಿವಾಸ್ ನಾಯಕ್, ಜಿಲ್ಲಾ ಶಿಕ್ಷಣ ಪ್ರಮುಖ ಶ್ರೀಪತಿ, ಶಿಕ್ಷಕರಾದ ಪ್ರೇಮ ನಾಯಕ್, ಯಶೋದ, ಜಯಶ್ರೀ, ನಳಿನಿ , ಅಶೋಕ್ ಕಾಮತ್, ರಮೇಶ್, ಶೇಖರ್ ಉಪಸ್ಥಿತರಿದ್ದರು.

ಶಶಿಕಲಾ ನಿರೂಪಿಸಿದರು. ಶ್ರೀನಿವಾಸ ನಾಯಕ್ ವಂದಿಸಿದರು. ವಿವಿಧ ಭಜನಾ ಮಂಡಳಿಗಳಿಂದ ಬೆಳಿಗ್ಗೆ ಗಂಟೆ 6.30ರಿಂದ ರಾತ್ರಿ 8.30ರವರೆಗೆ ಉದಯಾಸ್ತಮಾನ ಭಜನೆ ಜರಗಿತು.

ಕೊಡವೂರು ವಲಯ ಬ್ರಾಹ್ಮಣ ಸಮಿತಿ ಸದಸ್ಯರು ಶತರುದ್ರ ಪಾರಾಯಣ ನೆರವೇರಿಸಿದರು. ಪುತ್ತೂರು ಹಯವದನ ತಂತ್ರಿಗಳ ನೇತ್ರತ್ವದಲ್ಲಿ ಶತರುದ್ರಾಭಿಷೇಕ ಹಾಗು ಸಂಜೆ ರಂಗಪೂಜೆ ಸಂಪನ್ನಗೊಂಡಿತು.