ಉಡುಪಿ: ಬ್ರಹ್ಮಾವರ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಮೆರವಣಿಗೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಹುಲಿವೇಷದ ಊದುಪೂಜೆ ಕಾರ್ಯಕ್ರಮದಲ್ಲಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಭಾಗವಹಿಸಿ ಹುಲಿಕುಣಿತದ ಸೊಬಗನ್ನು ಸವಿದರು.
ವಾರಂಬಳ್ಳಿ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುಲಿವೇಷಧಾರಿಗಳ ವಿಶೇಷ ಕುಣಿತವನ್ನು ವೀಕ್ಷಿಸಿದ ಯತ್ನಾಳ್, ಹುಲಿವೇಷದ ತಾಸೆಯ ಪೆಟ್ಟಿಗೆ ಮನಸೋತು ಸ್ವತಃ ಕುಣಿತಕ್ಕೆ ಹೆಜ್ಜೆ ಹಾಕಿದರು.
ಹುಲಿವೇಷಧಾರಿಗಳೊಂದಿಗೆ ಕೆಲಕಾಲ ಸ್ಟೆಪ್ ಹಾಕಿ, ಹುಲಿಯಂತೆ ಕುಣಿದು ಸಂಭ್ರಮಿಸಿದರು.
ಯತ್ನಾಳ್ ಅವರ ಹುಲಿಕುಣಿತದ ದೃಶ್ಯ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆಯಿತು.















