udupixpress
Home Trending ಮೀನುಗಾರರಿಗೆ ರೂ.60 ಕೋಟಿ ಸಾಲಮನ್ನಾ ಮೊತ್ತ ಬಿಡುಗಡೆಗೊಳಿಸಿದ ಸರಕಾರದ ನಡೆ ಸ್ವಾಗತಾರ್ಹ:ಯಶ್ ಪಾಲ್...

ಮೀನುಗಾರರಿಗೆ ರೂ.60 ಕೋಟಿ ಸಾಲಮನ್ನಾ ಮೊತ್ತ ಬಿಡುಗಡೆಗೊಳಿಸಿದ ಸರಕಾರದ ನಡೆ ಸ್ವಾಗತಾರ್ಹ:ಯಶ್ ಪಾಲ್ ಸುವರ್ಣ

ಉಡುಪಿ:  ಕೊರೊನಾ ಮಹಾಮಾರಿಯ ಈ ಸಂದಿಗ್ಧ ಸಮಯದಲ್ಲಿ ಈಗಾಗಲೇ ರಾಜ್ಯ ಸರಕಾರ ಘೋಷಿಸಿದ್ದ 23 ಸಾವಿರ ಮಹಿಳಾ ಮೀನುಗಾರರ 60 ಕೋಟಿ ರೂಪಾಯಿ ಸಾಲಮನ್ನಾದ ಮೊತ್ತವನ್ನು ಬಿಡುಗಡೆಗೊಳಿಸಿದ ರಾಜ್ಯ ಸರಕಾರಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.

ಮಹಿಳಾ ಮೀನುಗಾರರ ಸಂಷ್ಟಕ್ಕೆ ಶೀಘ್ರವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲು, ಸಂಸದರಾದ ಶೋಭಾ ಕರಂದ್ಲಾಜೆ, ವೈ ರಾಘವೇಂದ್ರ,  ಅನಂತ್ ಕುಮಾರ್ ಹೆಗ್ಡೆ, ಹಾಗೂ ಸಾಲ ಮನ್ನಾ ಮಾಡಲು ವಿಶೇಷ ಪ್ರಯತ್ನಿಸಿದ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ್ ಶೆಟ್ಟಿ,  ವೇದವ್ಯಾಸ್ ಕಾಮತ್,  ಭರತ್ ಶೆಟ್ಟಿ,  ಉಮಾನಾಥ ಕೋಟ್ಯಾನ್ ಹಾಗೂ ಕರಾವಳಿಯ ಎಲ್ಲ ಶಾಸಕರಿಗೆ ಸಮಸ್ತ ಮೀನುಗಾರರ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!