ಯಶ್ ಅಭಿನಯದ ‘ಕೆಜಿಎಫ್’ ಟಿಕೆಟ್ ಬುಕ್ಕಿಂಗ್ ಓಪನ್ ಆಗ್ತಿದೆ. ಗೆಟ್ ರೆಡಿ.!

ಯಶ್ ಅಭಿನಯದ ಕೆಜಿಎಫ್’ ಸಿನಿಮಾ ಡಿಸೆಂಬರ್ 21ಕ್ಕೆ ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನ ಮೊದಲ ದಿನ ಮೊದಲ ಶೋ ನೋಡ್ಬೇಕು ಅಂತ ಚಿತ್ರಪ್ರೇಮಿಗಳು ಕಾಯ್ತಾ ಕೂತಿದ್ದಾರೆ.

ಈಗಾಗಲೇ ಯಶ್ ಅಭಿಮಾನಿಗಳು ಹಾಗೂ ಕೆಜಿಎಫ್ ಅಭಿಮಾನಿಗಳು ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ಯಾ? ಅಥವಾ ಯಾವ ಥಿಯೇಟರ್ ನಲ್ಲಿ ರಿಲೀಸ್ ಆಗ್ತಿದೆ ಎಂದು ಹುಡುಕಾಡ್ತಿದ್ದಾರೆ. ನಿರೀಕ್ಷೆಯಂತೆ ಇಷ್ಟೋತ್ತಿಗಾಗಲೇ ಕೆಜಿಎಫ್ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕೊಡಬೇಕಿತ್ತು. ಆದ್ರೆ, ಅಂತಹ ಸುಳಿವು ಸಿಕ್ಕಿರಲಿಲ್ಲ. ಇದೀಗ, ಕೆಜಿಎಫ್ ಟಿಕೆಟ್ ಬುಕ್ ಮಾಡೋ ಟೈಂ ಬಂದಿದೆ. ಬಿಡುಗಡೆಯ ಒಂದು ವಾರಕ್ಕೂ ಮುಂದೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಒಂದೂ ವಾರದ ಮುಂಚೆ ಅಂದ್ರೆ, ಡಿಸೆಂಬರ್ 16 ರಿಂದ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗುತ್ತಿದೆ ಎಂಬ ಸುದ್ದಿ ಈಗ ಹೊರಬಿದ್ದಿದೆ. ಭಾರತದೆಲ್ಲೆಡೆ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಮೊದಲ ದಿನ ಟಿಕೆಟ್ ಸಿಗುವುದೇ ಅನುಮಾನ ಮೂಡಿಸಿದೆ.


ಭಾರತದಲ್ಲಿ ಕೆಜಿಎಫ್ ಡಿಸೆಂಬರ್ 21 ರಂದು ತೆರೆಕಾಣುತ್ತಿದೆ. ಆದ್ರೆ, ಹೊರದೇಶಗಳಾದ ಯುಎಸ್ ಮತ್ತು ಕೆನೆಡಾದಲ್ಲಿ ಡಿಸೆಂಬರ್ 20 ರಂದೇ ಶೋ ಕಾಣಲಿದೆ. ಇದು ನಿಜಕ್ಕೂ ಅಲ್ಲಿನ ಕನ್ನಡಿಗರಿಗೆ ವಿಶೇಷವೇ ಸರಿ.

ಕೆಜಿಎಫ್ ಸಿನಿಮಾಗೆ 81 ಸಾವಿರ ಜನ ಆಸಕ್ತಿ ತೋರಿದ್ದಾರೆ ಸದ್ಯ, ಬುಕ್ ಮೈ ಶೋನಲ್ಲಿ ಕೆಜಿಎಫ್ ಚಿತ್ರದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಿನಿಮಾ ರಿಲೀಸ್ ಗೂ ಮುಂಚೆಯೇ ಇಷ್ಟೊಂದು ಕ್ರೇಜ್ ಹೊಂದಿರುವ ಸಿನಿಮಾ ಕೆಜಿಎಫ್ ಎಂಬುದಕ್ಕೆ ಇದು ಕೂಡ ಸಾಕ್ಷಿ ಎಂದು ಕೇಳಿ ಬರುತ್ತಿದೆ.