ಯರ್ಲಪಾಡಿ: ಸ್ವಚ್ಛತೆಗಾಗಿ ವಾಲಿಬಾಲ್ ಪಂದ್ಯಾಟ

ಕಾರ್ಕಳ : ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತೆಗಾಗಿ ಕ್ರೀಡೆ ಎನ್ನುವ ಉದ್ದೇಶದಿಂದ ಹಮ್ಮಿಕೊಂಡ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಹಾಗೂ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಟವು ಡಿ. 15ರಂದು ಯರ್ಲಪಾಡಿ ಹಿಲ್‌ವಿವ್ ಗಾರ್ಡನ್‌ನಲ್ಲಿ ನಡೆಯಿತು.

ಯರ್ಲಪಾಡಿ ಗ್ರಾಮ ಮಟ್ಟದ ವಾಲಿಬಾಲ್ ಪಂದ್ಯಾಟ ಸ್ವಚ್ಛ ಯರ್ಲಪಾಡಿ ಟ್ರೋಫಿಯನ್ನು ಕ್ರೀಡಾಂಗಣದ ಸ್ಥಳದಾನಿ ದಿಲೀಪ್ ಜಿ. ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರೀಡಾಕೂಟ ನಡೆಸಿರುವುದು ಮಾದರಿ ಕಾರ್ಯ ಎಂದರು.

ಯರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಯರ್ಲಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಉದಯ ಕುಮಾರ್ ಹೆಗ್ಡೆ, ಧರ್ಮರಾಜ್ ಕುಮಾರ್, ಉದ್ಯಮಿ ಜೀವಾನಂದ ಶೆಟ್ಟಿ, ಉದ್ಯಮಿ ರಮೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು. ಸುನೀಲ್ ಹೆಗ್ಡೆ ಸ್ವಾಗತಿಸಿ, ಸುಪ್ರಿತಾ ವಂದಿಸಿದರು.

ವಾಲಿಬಾಲ್ ಪಂದ್ಯಾಟದ ಫಲಿತಾಂಶ:
ಗ್ರಾಮೀಣ ಮಟ್ಟದಲ್ಲಿ
ಪ್ರಥಮ :ಎರ್ಲಪಾಡಿ ಫ್ರೆಂಡ್ಸ್ ಎ
ದ್ವಿತೀಯ :ಕಜಕೆಗುಡ್ಡೆ ಫ್ರೆಂಡ್ಸ್ ಬಿ
ತೃತೀಯ: ಎರ್ಲಪಾಡಿ ಫ್ರೆಂಡ್ಸ್ ಸಿ
ಚತುರ್ಥ :ಶಿವಾಜಿ ಬಳಗ ಕಾಂತರಗೋಳಿ
ಜಿಲ್ಲಾ ಮಟ್ಟದಲ್ಲಿ
ಪ್ರಥಮ ಪೊಸಮಾರು ಫ್ಯಾಮಿಲಿ ಫ್ರೆಂಡ್ಸ್ ಎರ್ಲಪಾಡಿ
ದ್ವಿತೀಯ :ಕೋಟಿ ಚೆನ್ನಯ ಫ್ರೆಂಡ್ಸ್ ಬೈಲೂರು
ತೃತೀಯ: ಕಾನಂಗಿ ಫ್ರೆಂಡ್ಸ್ ಕುತ್ಪಾಡಿ
ಚತುರ್ಥ :ಆರಕ್ಷಕ ಠಾಣೆ ಬಳಗ ಕಾರ್ಕಳ