ಕಾರ್ಕಳ: ಯಕ್ಷಕಲಾ ರಂಗ ಕಡ್ತಲ ಇದರ ವತಿಯಿಂದ ವಿಷ್ಣು ತೆಂಡೂಲ್ಕರ್ ಕಾಜರಗುತ್ತು, ರಮೇಶ್ ನಾಯಕ್ ಮತ್ತು ಜಗದೀಶ್ ನಾಯಕ್ ಅವರ ನಿರ್ದೇಶನದಲ್ಲಿ ಬಡಗುತಿಟ್ಟಿನ ಯಕ್ಷಗಾನ ತರಬೇತಿ ಕಾರ್ಯಕ್ರಮವು ಈಚೆಗೆ ಕಡ್ತಲ ಸಿರಿಬೈಲು ಬರ್ಭರೇಶ್ವರ ಸಭಾಂಗಣದಲ್ಲಿ ನಡೆಯಿತು .
ಹಿರಿಯ ನಿವೃತ್ತ ಉಪನ್ಯಾಸಕ ಕರುಣಾಕರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲೆಗೆ ತರಬೇತಿ ನೀಡಿ ಕಲೆಯನ್ನು ಉಳಿಸುವ ಕಾರ್ಯ ಶ್ಲಾಘನೀಯವಾದುದು ಎಂದರು.
ಮಾಜಿ ಗ್ರಾಪಂ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಕಡ್ತಲ ಕರಾವಳಿ ಪ್ರಾಧಿಕಾರದ ಸದಸ್ಯ ಸಂಜೀವ ಪೂಜಾರಿ ಕಂಟೆಬೆಟ್ಟು, ಲಕ್ಷ್ಮಿಪುರ ದೇವಸ್ಥಾನದ ಮಾಜಿ ಮೊಕ್ತೇಸರ ರಘುರಾಮ್ ನಾಯಕ್ ಅಂಡಾರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಂಘಟಕ ಸದಾನಂದ ನಾಯಕ್ ಲಿಂಗರ ಬೆಟ್ಟು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.












