ಮಂಗಳೂರು: ಮಂಗಳೂರಿನಲ್ಲಿರುವ ಬಡಗು ತಿಟ್ಟು ಯಕ್ಷಗಾನ ಆಸಕ್ತರು ಹುಟ್ಟುಹಾಕಿದ ‘ಯಕ್ಷಾಭಿನಯ ಬಳಗ’ದ ಎರಡನೆಯ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಪ್ರದರ್ಶನ ವಾರಾಂತ್ಯದ ಲಾಕ್ಡೌನ್ ಕಾರಣದಿಂದ ಮುಂದೂಡಿದ್ದು, ಇದೇ ಬರುವ ಜನವರಿ 13ಕ್ಕೆ ಮಂಗಳೂರಿನ ಪುರಭವನದಲ್ಲಿ ಮರುನಿಗದಿಗೊಂಡಿದೆ.
ಅಂದು ಅಪರಾಹ್ನ 2.30 ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಗುರು ಐರೋಡಿ ಮಂಜುನಾಥ ಕುಲಾಲ್ ನಿರ್ದೇಶನದಲ್ಲಿ ಸಂಸ್ಥೆಯ ಶಿಕ್ಷಣಾರ್ಥಿ ಸದಸ್ಯರಿಂದ ಅಭಿಮನ್ಯು ಕಾಳಗ ಮತ್ತು ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಭರತ್ ಚಂದನ್, ಶ್ರೀಕಾಂತ್ ಶೆಟ್ಟಿ ಭಾಗವಹಿಸಲಿದ್ದಾರೆ. ಯಕ್ಷಗಾನ ಕಾರ್ಯಕ್ರಮದ ನಡುವಿನಲ್ಲಿ ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್ ಅವರಿಗೆ ಗುರುವಂದನೆ ನಡೆಯಲಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಕಟ್ಟೆಯ ಅಧ್ಯಕ್ಷ ಹಾಗೂ ಮ.ನ.ಪಾ ದ ವೈದ್ಯಾಧಿಕಾರಿ ಡಾ.ಅಣ್ಣಯ್ಯ ಕುಲಾಲ್, ಕಾಪಿಕಾಡ್ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಾವನ ಕೆ. ಹಾಗೂ ಎಸ್. ಎಲ್. ಶೇಟ್ ಡೈಮಂಡ್ ಹೌಸ್ ನ ಮಾಲಕ ರವೀಂದ್ರ ಶೇಟ್ ಭಾಗವಹಿಸಲಿಕ್ಕಿದ್ದಾರೆ. ಎಂದು ಯಕ್ಷಾಭಿನಯದ ಅಧ್ಯಕ್ಷ ಪ್ರಶಾಂತ್ ಕುಮಾರ ಶೆಟ್ಟಿ, ಸಂತೋಷ ಶೆಟ್ಟಿ, ರಾಘವೇಂದ್ರ ನೆಲ್ಲಿಕಟ್ಟೆ ಹಾಗೂ ಇತರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.