ಯಕ್ಷಗಾನ ಕಲಾವಿದರಾಗುವ ಆಸಕ್ತಿಯೇ?ಇಲ್ಲಿದೆ ನೋಡಿ ತರಬೇತಿ ಶಿಬಿರ

ಉಡುಪಿ :ಕರ್ನಾಟಕ ಯಕ್ಷಗಾನ ಅಕಾಡೆಮಿಯು 2019-20 ನೇ ಸಾಲಿನಲ್ಲಿ ಸಾಮಾನ್ಯ ಯೋಜನೆಯಡಿ 2 ತಿಂಗಳ ಯಕ್ಷಗಾನ ತರಬೇತಿಗೆ (ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗುತಿಟ್ಟು) ಕಲಾವಿದರುಗಳಿಂದ/ ಕಲಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಯಕ್ಷಗಾನ ತರಬೇತಿಯನ್ನು ಕನಿಷ್ಟ 10 ಮಂದಿಗೆ ನೀಡಬಯಸುವ ಆಸಕ್ತ ಕಲಾವಿದರು/ ಕಲಾ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. 2018-19 ನೇ ಸಾಲಿನಲ್ಲಿ ಯಕ್ಷಗಾನ ತರಬೇತಿಗೆ ಅವಕಾಶ ಪಡೆದ ಕಲಾಸಂಸ್ಥೆ/ ಕಲಾವಿದರಿಗೆ ಅವಕಾಶವಿರುವುದಿಲ್ಲ.

    ಯಕ್ಷಗಾನ ತರಬೇತಿ ನೀಡಬಯಸುವ ಆಸಕ್ತ ಕಲಾವಿದರುಗಳು/ ಕಲಾಸಂಸ್ಥೆಗಳು ತಮ್ಮ ಮನವಿಯನ್ನು ಜುಲೈ 15 ರ ಒಳಗೆ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಬೆಂಗಳೂರು ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ: 080-22113146 ಅನ್ನು ಸಂಪರ್ಕಿಸುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.