ಉಡುಪಿ:ಯಕ್ಷಗಾನ ಕಲಾಕ್ಷೇತ್ರ: 75 ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ:ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ ದ 75 ನೇ ವಾರ್ಷಿಕೋತ್ಸವ, ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ,ಅಮೃತ ಮಹೋತ್ಸವ ಸಮಿತಿಯ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಗುಂಡಿಬೈಲು ತಲ್ಲೂರು ಗಾರ್ಡನ್ ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ ಇಂದ್ರಾಳಿ ಜಯಕರ್ ಶೆಟ್ಟಿ  ಯವರು  ಉಡುಪಿ ಜಿಲ್ಲೆಯ ಇತಿಹಾಸದಲ್ಲಿ  ಅಮೃತ ಮಹೋತ್ಸವ ಕಂಡ ಏಕೈಕ ಹವ್ಯಾಸಿ ಯಕ್ಷಗಾನ ಸಂಘ ಕಲಾಕ್ಷೇತ್ರವಾಗಿದೆ.ನೂರಾರು ಕಲಾವಿದರನ್ನು ಕಲಾಸೇವೆಗೆ ತೊಡಗಿಸಿ ಕೊಳ್ಳುವಂತೆ ಮಾಡುವಲ್ಲಿ ಸಂಘದ ಪಾತ್ರ ಹಿರಿದಾಗಿದೆ ಎಂದು ಹೇಳಿದರು.

ರಾಜ್ಯೋತ್ಸವ ಪುರಸ್ಕೃತ ಜಾನಪದ ವಿದ್ವಾಂಸ  ಬನ್ನಂಜೆ ಬಾಬು ಅಮೀನ್ ತಮ್ಮ ಪ್ರಸ್ತಾವನೆಯಲ್ಲಿ ಸಂಘ ಸ್ಥಾಪನೆಗೆ ಕಾರಣೀಕರ್ತರನ್ನು ಸ್ಮರಿಸಿ ಆರಂಭ ದಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿ ಗತಿಸಿದ ಸೂರಾರು ಸಕ್ರಿಯ ಸದಸ್ಯರು ಸ್ವರ್ಗದಲ್ಲಿ ನೆಲೆಯಾಗಿ ಅಮೃತ ಮಹೋತ್ಸವದ ಸಂದರ್ಭದಲ್ಲಿ  ಅದೃಶ್ಯ ರೂಪವಾಗಿ ನಮ್ಮ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ  ಎಂದರು.

ಅಮೃತ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಗೊಳಿಸಿದ ಅದಿತಿ ಬಿಲ್ಡರ್ ಮಾಲಕ, ಉಡುಪಿ ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ರಂಜನ್  ಇವರು ಕಲಾಕ್ಷೇತ್ರ ದ ನಿರಂತರ ಕಲಾ ಚಟುವಟಿಕೆ ಗಳನ್ನು ಸ್ಥಳೀಯ ನಿವಾಸಿಯಾಗಿ ಗಮನಿಸಿದ್ದೇನೆ.ಅಮೃತ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿರುವುದು ಸೌಭಾಗ್ಯ , ಸಂಘ ಹಮ್ಮಿ ಕೊಂಡಿರುವ ಎಲ್ಲಾ ಕಾರ್ಯಯೋಜನೆಗಳು ಯಶಸ್ವಿ ಯಾಗಲಿ ಎಂದು ಹಾರೈಸಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಕ್ಕಳ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಸಂಸ್ಥೆ ಗೆ ಶುಭ ಹಾರೈಸಿದರು.

ಅಮೃತ ಮಹೋತ್ಸವ ಕಾರ್ಯಯೋಜನೆ ಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಹಿರಿಯ ಯಕ್ಷಗಾನ ಕಲಾವಿದ, ಪ್ರಸಿದ್ಧ ಸ್ತ್ರೀ ವೇಷಧಾರಿ ದಯಾನಂದ ಬಳೆಗಾರ ನಾಗೂರು ಇವರಿಗೆ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಯನ್ನು ಗಣ್ಯರ ಉಪಸ್ಥಿತಿ ಯಲ್ಲಿ ಪ್ರದಾನ ಮಾಡಲಾಯಿತು.

ಯಕ್ಷಗಾನ ವಿಮರ್ಶಕ ಫ್ರೊ ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.ಸಂಘದ ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಸ್ವಾಗತಿಸಿದರು, ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ವರದಿ ವಾಚನ ಮಾಡಿದರು.ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ಧನ್ಯವಾದ ಸಮರ್ಪಿಸಿದರು.ಸಂಘದ ವಿದ್ಯಾರ್ಥಿಗಳಿಂದ ಮಾಯಾಪುರಿ ಮಹಾತ್ಮೆ ಹಾಗೂ ವೀರ ಮಣಿ ಕಾಳಗ ಯಕ್ಷಗಾನ ಬಯಲಾಟ ಜರಗಿತು.