ಉಡುಪಿ: ಬಡಗುತಿಟ್ಟುವಿನ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಹಾಲಾಡಿ ಮೇಳದ ಯಕ್ಷಗಾನ ಪ್ರದರ್ಶನ ಆಗುತ್ತಿರುವ ವೇಳೆ ತಾಳ್ಮೆ ಕಳೆದುಕೊಂಡ ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳಲ್ಲೇ ಎದುರಿನ ಸಾಲಿನಲ್ಲಿ ಕುಳಿತ ಮಕ್ಕಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ತುಣುಕೊಂದು ಭಾರಿ ವೈರಲ್ ಆಗಿದೆ.
ಯಕ್ಷಗಾನ ಕಲಾವಿದರು ಸಂಭಾಷಣೆ ನಡೆಸುತ್ತಿರುವ ವೇಳೆ ಎದುರಿನಲ್ಲಿ ಕುಳಿತ್ತಿದ್ದ ಮಕ್ಕಳು ಮೊಬೈಲ್ ನೋಡಿಕೊಂಡು ಜೋರಾಗಿ ಮಾತಾಡುತ್ತಿದ್ದರು. ಇದರಿಂದ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ವಿಜಯ ಗಾಣಿಗ ಬೀಜಮಕ್ಕಿ ಅವರಿಗೆ ಸಂಭಾಷಣೆ ನುಡಿಯಲು ಅಡಚಣೆಯಾಗಿದೆ.
ಇದರಿಂದ ತಾಳ್ಮೆ ಕಳೆದುಕೊಂಡ ಅವರು, ‘ಏ ಮಗಳೇ, ನೀನು ಮೊಬೈಲ್ ನೋಡಿಕೊಂಡು ಮಾತನಾಡುವುದಾದರೆ ಹಿಂದೆ ಹೋಗು. ನೀವು ಮುಂದೆ ಕುಳಿತುಕೊಂಡು ಮಾತನಾಡುತ್ತಿದ್ರೆ ನಾವೇ ಎಂಥಾ ಮಾಡುವುದಿಲ್ಲಿ. ಆಗೊಮ್ಮೆ ಹೇಳಿದೆ ನಿನ್ಗೆ. ಮಾತಾಡ್ಲಿಕೆ ಆಗುವುದಿಲ್ಲಾ ಪುಟ ಇಲ್ಲಿ. ನೀವು ಮಾತನಾಡಿದರೆ ನಮಗೆ ಮಾತನಾಡಲು ಕಷ್ಟ ಆಗುತ್ತದೆ’ ಅಂಥಾ ಗದರಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.