ನವದೆಹಲಿ: ಮುಂಬೈ ಮೂಲದ ಸ್ಟಾರ್ಟ್ಅಪ್ ಕಂಪನಿ ಲೈಗರ್ ಮೊಬಿಲಿಟಿಯು ದೆಹಲಿ ಆಟೋ ಎಕ್ಸ್ಪೋ 2023 ರಲ್ಲಿ ಎರಡು ಹೊಸ ಸ್ವಯಂ-ಸಮತೋಲಿತ ಎಲೆಕ್ಟ್ರಿಕ್ ಸ್ಕೂಟರ್ಗಳಾದ ಲೈಗರ್ ಎಕ್ಸ್ ಮತ್ತು ಲೈಗರ್ ಎಕ್ಸ್ + ಅನ್ನು ಅನಾವರಣಗೊಳಿಸಿದೆ. ಕೃತಕ ಬುದ್ದಿಮತ್ತೆಯ ಸೆನ್ಸರ್ ಗಳನ್ನು ಅಳವಡಿಸಿರುವ ಇ-ಸ್ಕೂಟರ್ಗಳು ತಮ್ಮನ್ನು ತಾವೇ ಸಮತೋಲದಲ್ಲಿಡಲು ಸಮರ್ಥವಾಗಿದೆ.
ಎರಡೂ ಸ್ಕೂಟರ್ ಗಳು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದರೂ, ಲೈಗರ್ ಎಕ್ಸ್ + ಗಿಂತ ಭಿನ್ನವಾಗಿರುವ ಎಕ್ಸ್ ನ ಬ್ಯಾಟರಿಗಳನ್ನು ಹೊರತೆಗೆಯಬಹುದು ಮತ್ತು ಎಲ್ಲಿ ಬೇಕೆಂದರಲ್ಲಿ ಕೊಂಡೊಯ್ದು ಚಾರ್ಜ್ ಮಾಡಬಹುದು.
Mumbai-based tech startup Liger Mobility just unveiled the Liger X and Liger X+ self-balancing electric scooters at the #AutoExpo2023. A true innovation in the field of electric vehicles #innovation #electricvehicles #mobilitypic.twitter.com/XrqYtnO2Y1
— Athshi (@athshi_) January 11, 2023
ಇವೆರಡೂ ಸ್ಕೂಟರ್ ಗಳು ಆಟೋಬ್ಯಾಲೆನ್ಸಿಂಗ್ (ಸ್ವಯಂ-ಸಮತೋಲನ) ತಂತ್ರಜ್ಞಾನವನ್ನು ಹೊಂದಿದ್ದು, ಇ-ಸ್ಕೂಟರ್ಗಳನ್ನು ನಿಲ್ಲಿಸಿದಾಗ ಅಥವಾ ಇದರ ವೇಗ ಕಡಿಮೆಗೊಳಿಸಿದಾಗ ಸವಾರರು ಅವರ ಕಾಲುಗಳನ್ನು ನೆಲಕ್ಕೆ ತಾಗಿಸುವ ಪ್ರಮೇಯವೆ ಇರುವುದಿಲ್ಲ. ವಾಹನವನ್ನು ರಿವರ್ಸ್ ಮಾಡುವಾಗಲೂ ಕಾಲುಗಳನ್ನು ನೆಲಕ್ಕೆ ತಾಗಿಸಬೇಕಾದ ಅಗತ್ಯ ಇಲ್ಲ. ಅಂದರೆ ವಾಹನವು ನಿಧಾನವಾಗಿದ್ದಾಗ ಅಥವಾ ನಿಂತಿದ್ದಾಗ ಅದಕ್ಕೆ ಕಾಲುಗಳಿಂದ ಆಧಾರ ನೀಡಬೇಕಾಗಿರುವ ಅಗತ್ಯವೆ ಬೀಳುವುದಿಲ್ಲ.
ಸ್ಕೂಟರ್ ಪೂರ್ವನಿರ್ಧರಿತ ವೇಗವನ್ನು ದಾಟಿದಾಗ ಈ ಆಟೋಬ್ಯಾಲೆನ್ಸಿಂಗ್ ವೈಶಿಷ್ಟ್ಯವನ್ನು ಹಸ್ತಚಾಲಿತವಾಗಿ ಸ್ವಿಚ್ ಆಫ್ ಮಾಡಬಹುದಾಗಿದೆ. ಸ್ಕೂಟರ್ ಗಳು ಲರ್ನರ್ ಮೋಡ್: ಇದು ಆಟೋ ಬ್ಯಾಲೆನ್ಸಿಂಗ್ ವೈಶಿಷ್ಟ್ಯದೊಂದಿಗೆ ಇ-ಸ್ಕೂಟರ್ನ ಹೆಚ್ಚಿನ ವೇಗವನ್ನು ಮಿತಿಗೊಳಿಸಲು ರೈಡರ್ ಗೆ ಅನುಮತಿಸುತ್ತದೆ ಮತ್ತು ಓವರ್ ದಿ ಏರ್ ಸಾಫ್ಟ್ವೇರ್ ನವೀಕರಣಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿವೆ.
ಲೈಗರ್ ಎಕ್ಸ್ ತೆಗೆಯಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದನ್ನು 3 ಗಂಟೆಗಳಲ್ಲಿ ಪೂರ್ಣವಾಗಿ ಚಾರ್ಜ್ ಮಾಡಬಹುದು. ಇದರ ಗರಿಷ್ಠ ವೇಗ ಗಂಟೆಗೆ 65 ಕಿಮೀ ಆಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 60 ಕಿಮೀ ಕ್ರಮಿಸಬಹುದು. ಏತನ್ಮಧ್ಯೆ, ಲೈಗರ್ ಎಕ್ಸ್+ 4.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾದ ತೆಗೆದುಹಾಕಲಾಗದ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ ಮತ್ತು 100ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.
ಹೆಚ್ಚುವರಿಯಾಗಿ,ಲೈಗರ್ ಎಕ್ಸ್+ ಅದರ ಟಿ.ಎಫ್.ಟಿ ಡ್ಯಾಶ್ನಲ್ಲಿ ಎಚ್ಚರಿಕೆಗಳು ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ನಂತಹ ವೈಶಿಷ್ಟ್ಯಗಳನ್ನು ಕಂಪನಿ ಸ್ವಾಮ್ಯದ ಅಪ್ಲಿಕೇಶನ್ ಅನ್ನು ಸ್ಮಾರ್ಟ್ಫೋನ್ಗೆ ಜೋಡಿಸುವ ಮೂಲಕ ಪಡೆಯಬಹುದು. ಲೈವ್ ಲೊಕೇಶನ್ ಟ್ರ್ಯಾಕಿಂಗ್, ಬ್ಯಾಟರಿ ತಾಪಮಾನ ಸೂಚಕ, ಟೋವಿಂಗ್ ಮತ್ತು ಅಪಘಾತ ಎಚ್ಚರಿಕೆಗಳಂತಹ ವೈಶಿಷ್ಟ್ಯಗಳು ಎರಡೂ ಸ್ಕೂಟರ್ಗಳಿಗೆ ಸಾಮಾನ್ಯವಾಗಿದೆ. ಬೂದು, ಪೋಲಾರ್ ವೈಟ್, ನೀಲಿ, ಟೈಟಾನಿಯಂ ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿದೆ. ಬುಕಿಂಗ್ಗಳು 2023 ರ ಮಧ್ಯದಲ್ಲಿ ಪ್ರಾರಂಭವಾಗುತ್ತವೆ ಮತ್ತು ವಿತರಣೆಗಳು ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗಲಿವೆ ಎಂದು ಕಂಪನಿ ತಿಳಿಸಿದೆ.












