ಕ್ರಿಕೆಟ್ ತವರಿನಲ್ಲಿ‌ ನಾಳೆಯಿಂದ 12ನೇ ವಿಶ್ವಕಪ್ ಟೂರ್ನಿ ಮೇ.30: ಇಂಗ್ಲೆಂಡ್-ದ.ಆಫ್ರಿಕಾ ಮೊದಲ ಪಂದ್ಯ

ಸ್ಪೋಟ್ಸ್ ಬೀಟ್: ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆ (ಐಸಿಸಿ)ಯ 2019ರ 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿ ಮೇ. 30ರಿಂದ ಅದ್ದೂರಿಯಾಗಿ ಪ್ರಾರಂಭಗೊಳ್ಳಲಿದೆ.
ಈ ಭಾರೀ ಇಂಗ್ಲೆಂಡ್ ನ ಆತಿಥ್ಯ ದಲ್ಲಿ‌ ವಿಶ್ವಕಪ್ ನಡಯಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಟ ತಂಡಗಳಾದ ಅತಿಥೇಯ ಇಂಗ್ಲೆಂಡ್ ಹಾಗೂ‌ ದ.ಆಫ್ರಿಕಾ ತಂಡಗಳು ಮುಖಾಮುಖಿ ಯಾಗಲಿವೆ. 2019ರ ವಿಶ್ವಕಪ್‌ ಕ್ರಿಕೆಟ್ ನಲ್ಲಿ ಭಾಗವಹಿಸುವ 10 ತಂಡಗಳು ಇಂಗ್ಲೆಂಡ್ ನಲ್ಲಿ‌ಬೀಡು ಬಿಟ್ಟಿವೆ. ಅಭ್ಯಾಸ ಪಂದ್ಯಗಳು ಈಗಾಗಲೇ ನಡೆದಿವೆ. ಗುರುವಾರದಿಂದ ಲೀಗ್ ಹಂತದ ಪಂದ್ಯಗಳಲ್ಲಿ ತಂಡಗಳು ತಮ್ಮ ಬಲಾಬಲ‌ ಪ್ರದರ್ಶನಕ್ಕೆ ಮುಂದಾಗಲಿವೆ.
 
ಜುಲೈ 6ರ ವರೆಗೆ ಲೀಗ್ ಪಂದ್ಯಗಳು ‌ನಡೆಯಲಿದ್ದು, ಜು.14 ರಂದು ‌ಫೈನಲ್‌ ಪಂದ್ಯಾಟ ನಡೆಯಲಿದೆ.
ಹಾಲಿ ಚ್ಯಾಂಪಿಯನ್ ಆಸ್ಟ್ರೇಲಿಯಾ ಹಾಗೂ ಅತಿಥೇಯ ಇಂಗ್ಲೆಂಡ್ ಎರಡೂ ತಂಡಗಳು ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಈ ಎರಡು ತಂಡಗಳ ಜತೆ ಭಾರತ, ದಕ್ಷಿಣ ಆಫ್ರಿಕಾ ತಂಡಗಳು ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ. ಇವಲ್ಲದೇ ವೆಸ್ಟ್ ಇಂಡೀಸ್ ತಂಡವೂ ಅಭ್ಯಾಸ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ಯಾವುದೇ ತಂಡವನ್ನು ಮಣಿಸುವ ಸಾಮಾರ್ಥ್ಯ ಇದೆ ಎನ್ನುವ ಸೂಚನೆ ನೀಡಿದೆ. 
 
ದಿಗ್ಗಜರ ಕೊನೆಯ ವಿಶ್ವಕಪ್:
ಕ್ರಿಕೆಟ್ ಜಗತ್ತಿನಲ್ಲಿ ಅನೇಕ‌ ವರ್ಷಗಳ ಕಾಲ‌ ಮಿಂಚಿ ಹಲವು ದಾಖಲೆಗಳನ್ನು ಬರೆದ ಕೆಲವು ಕ್ರಿಕೆಟ್ ದಿಗ್ಗಜರಿಗೆ ಇದೇ ಕೊನೆಯ ವಿಶ್ವಕಪ್ ಆಗಲಿದೆ. ಕೆರಿಬಿಯನ್ ನ‌ ದೈತ್ಯ ಬ್ಯಾಟ್ಸ್‌ಮನ್‌ ಹಲವು ವರ್ಷಗಳಿಂದ ವಿಶ್ವ ಕ್ರಿಕೆಟ್ ನಲ್ಲಿ ದಾಖಲೆ‌ ಬರೆದ 40ರ ಹರೆಯದ ಕ್ರಿಸ್ಗೈಲ್, ಭಾರತ ತಂಡದ‌ ಶಕ್ತಿ 37ರ ಹರೆಯದ ಮಹೇಂದ್ರ ಸಿಂಗ್ ಧೋನಿ, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್, ಡ್ಯುಮಿನಿ, ಡೇಲ್ ಸ್ಟೈನ್, ಯಾರ್ಕರ್ ಸ್ಪೇಷಾಲಿಸ್ಟ್ ಶ್ರೀಲಂಕಾದ ಲಸಿತ್ ಮಾಲಿಂಗ, ಹಾಗೆಯೇ ಪಾಕಿಸ್ತಾನದ ಮಹಮ್ಮದ್ ಹಫೀಜ್, ನ್ಯೂಜಿಲ್ಯಾಂಡ್ ನ ರಾಸ್ ಟೇಲರ್, ದ.ಆಫ್ರಿಕಾದ ಫಾ.ಡು. ಫ್ಲೆಸಿಸ್ ಸೇರಿದಂತೆ ಮತ್ತಿತರ ಹಲವು ಪ್ರತಿಭಾವಂತ ಆಟಗಾಗರಿಗೆ ಇದೇ ಕೊನೆಯ‌‌‌ ವಿಶ್ವಕಪ್ ಟೂರ್ನಿ ಇದಾಗಿದೆ.