ನಟ ಯಶ್ ಅವರ ಚಿತ್ರ ‘ಕೆಜಿಎಫ್: ಚಾಪ್ಟರ್ 2’ ಕ್ರೇಜ್ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ವಿಶ್ವಾದ್ಯಂತ ಬಾಕ್ಸ್ ಆಫೀಸ್ ಅನ್ನು ಕೊಳ್ಳೆಹೊಡೆಯುತ್ತಿರುವ ಈ ಚಿತ್ರ ಮೊದಲನೆ ವಾರದಲ್ಲಿ 720.31 ಕೋಟಿ ರೂಪಾಯಿಗಳನ್ನು ಗಲ್ಲಾ ಪೆಟ್ಟಿಗೆಯಿಂದ ಬಾಚಿಕೊಂಡಿದ್ದು, ಎರಡನೇ ವಾರಾಂತ್ಯದಲ್ಲಿ ಚಿತ್ರವು ಬರೋಬ್ಬರಿ 800 ಕೋಟಿ ರೂಪಾಯಿಗಳನ್ನು ದಾಟುವ ನಿರೀಕ್ಷೆ ಇದೆ.
ಕೆಜಿಎಫ್ ಚಾಪ್ಟರ್ 2 ಗಳಿಕೆ:
ಮೊದಲನೆ ವಾರ – ₹ 720.31 ಕೋಟಿ
ಎರಡನೇ ವಾರ
ದಿನ 1 – ₹ 30.18 ಕೋಟಿ
ದಿನ 2 – ₹ 26.09 ಕೋಟಿ
ಒಟ್ಟು ಗಳಿಕೆ – ₹ 776.58 ಕೋಟಿ
ಚಿತ್ರದ ಯಶಸ್ಸಿನ ಬಳಿಕ ನಾಯಕ ನಟ ಯಶ್ ಭಾವನಾತ್ಮಕ ಭಾಷಣ ಒಂದನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು “ಇಡೀ ಕೆಜಿಎಫ್ ತಂಡದ ಪರವಾಗಿ ನಾನು ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನೀವು ಚಿತ್ರವನ್ನು ಆನಂದಿಸುತ್ತಿದ್ದೀರಿ ಮತ್ತು ಅದನ್ನು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಂತಿಮವಾಗಿ, ನಿಮ್ಮ ಹೃದಯವೆ ನನ್ನ ಡೇರೆ ಎಂದು ನಾನು ಹೇಳಲು ಬಯಸುತ್ತೇನೆ!” ಎಂದಿದ್ದಾರೆ.