ಮಣಿಪಾಲ: ಪಥ್ಯಾಹಾರ ವಿಭಾಗ, ಕಸ್ತೂರ್ಬಾ ಅಸ್ಪತ್ರೆ ಮಣಿಪಾಲ ಮತ್ತು ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯೆಟೆಟಿಕ್ಸ್ ವಿಭಾಗ, ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ ಹಾಗೂ ಡಾ . ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ವಿಶ್ವ ಆರೋಗ್ಯ ದಿನದ ಸಲುವಾಗಿ ಅರೋಗ್ಯ ಜಾಗ್ರತಿ ಕಾರ್ಯಕ್ರಮವನ್ನು ಏಪ್ರಿಲ್ 8 ರಂದು ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮತ್ತು ಪಥ್ಯಾಹಾರ ತಜ್ಞೆಯಾಗಿರುವ ದಕ್ಷ ಕುಮಾರಿ ಇವರು ಪೌಷ್ಟಿಕಾಂಶ ಕುರಿತಾದ ಸತ್ಯಗಳು ಮತ್ತು ಮಿಥ್ಯಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಆ ಬಳಿಕ ವಿದ್ಯಾರ್ಥಿಗಳಿಗೆ ಮನೋರಂಜನಾ ಆಟಗಳ ಮೂಲಕ ಆರೋಗ್ಯಕರ ಆಹಾರದ ಆಯ್ಕೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ಎನ್ ಹಾಗೂ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಾಣಿ ಆರ್ ಬಲ್ಲಾಳ್ ಹಾಗೂ ಕಸ್ತೂರ್ಬಾ ಅಸ್ಪತ್ರೆಯ ಪಥ್ಯಾಹಾರ ತಜ್ಞರಾದ ಸುಶ್ಮಿತಾ , ಕವಿತ , ಜೋನಿಯಾ ಹಾಗೂ ರಚಿತಾ ಉಪಸ್ಥಿತರಿದ್ದರು.