ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಉಡುಪಿ: ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜೂನ್ 5 ರಂದು ಪಡಿಬಿದ್ರಿ ಬೀಚ್‍ನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ.

ತದನಂತರ ‘ಐ ಆಮ್ ಸೇವಿಂಗ್ ಮೈ ಬೀಚ್’ ಆಂದೋಲನ ಹಾಗೂ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಕೌಟ್ಸ್-ಗೈಡ್ಸ್ ಮಕ್ಕಳಿಂದ ಸೀಡ್ ಬಾಲ್ ತಯಾರಿಕಾ ಪ್ರಾತ್ಯಕ್ಷತೆ, ಮಕ್ಕಳಿಗಾಗಿ ಹೂವು ಕುಂಡ ತಯಾರಿ ಮಾಹಿತಿ, ವಿಶ್ವ ಪರಿಸರ ದಿನಾಚರಣೆ ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವಲ್ಲಿ ಶ್ರಮ ವಹಿಸಿರುವ ಕರಾವಳಿ ಸ್ಟಾರ್ಸ್ ಪಡುಬಿದ್ರೆ, ಯಾರ್ಡ್ ಫ್ರೇಂಡ್ಸ್ ಗ್ರೂಪ್ ಉಳಿಯಾರಗೊಳಿ, ಸುದೇಶ ಶೇಟ್ಟಿ ಮಲ್ಪೆ, ಕ್ಲೀನ್ ಕುಂದಾಪುರ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ಪಡುಬಿದ್ರಿ ಇವರನ್ನು ಗೌರವಿಸಲಾಗುವುದು.

ಬೀಚ್ ಸ್ವಚ್ಛತಾ  ಸೇವಾ ಕಾರ್ಯಕ್ರಮದಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡಿರುವ ಮನೋಹರ ಶೆಟ್ಟಿ, ಡಾ. ವಿಜೇಂದ್ರ, ಉದಯ ಶೆಟ್ಟಿ, ಚಂದ್ರಕಾಂತ ಶೆಣೈ ಕುಂದಾಪುರ, ಡಾ. ಸ್ಟೀಟಿವನ್ ಜಾರ್ಜ್ ಇವರನ್ನು ಸನ್ಮಾನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.