ಬ್ರಹ್ಮಾವರ: ಬ್ರಹ್ಮಾವರ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ ಟಿಟ್ಯೂಟ್ ಸಂಸ್ಥೆಯಲ್ಲಿ, ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇದರ ಜೊತೆಗೆ ಪರಿಸರ ದಿನದ ಹಿನ್ನೆಲೆಯಲ್ಲಿ ರಸಪ್ರಶ್ನೆ ಮತ್ತು ತರಗತಿ ಕೊಠಡಿಯ ಅಲಂಕಾರದಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ವಿದ್ಯಾರ್ಥಿಗಳು ತಾವೇ ಖುದ್ದಾಗಿ ನಿರ್ಮಿಸಿದ ವಸ್ತುಗಳನ್ನು ಉಪಯೋಗಿಸಿ ಕೊಠಡಿಯ ಅಲಂಕಾರ ಕೈಗೊಂಡರು. ಕಸದಿಂದ ರಸ ಅನ್ನುವ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಸಂಸ್ಥೆಯು ಹೆಜ್ಜೆ ಇಟ್ಟಿದ್ದು ಸಮಾಜದಲ್ಲಿ ಉತ್ತಮ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ, ನಿರ್ದೇಶಕಿ ಮಮತಾ, ಪ್ರಾಂಶುಪಾಲೆ ಸೀಮಾ ಭಟ್ ಉಪಸ್ಥಿತರಿದ್ದರು.












