ವಿಶ್ವ ಕಾಫಿ ಮೂರು ದಿನಗಳ ಸಮಾವೇಶಕ್ಕೆ ತೆರೆ

ಬೆಂಗಳೂರ :ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಜಿ ಜಗದೀಶ್​ ಕಳೆದ ಮೂರು ದಿನಗಳಿಂದ ನಗರದ ಅರಮನೆ ಮೈದಾನದಲ್ಲಿ ನಡೆದ “ವಿಶ್ವ ಕಾಫಿ ಸಮಾವೇಶ” ಗುರುವಾರ ತೆರೆ ಕಂಡಿತು. ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ ಎಂದು ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಜಿ ಜಗದೀಶ್​ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಭಾರತೀಯ ರೊಬಾಸ್ಟಾ ಕಾಫಿ ಅತಿ ವೇಗವಾಗಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ ಎಂದು ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಜಿ ಜಗದೀಶ್​ ತಿಳಿಸಿದ್ದಾರೆ.

ದೇಶದಲ್ಲಿ ಇದೇ ಮೊದಲ ಬಾರಿ ನಡೆದ ಈ ಸಮಾವೇಶ ಕಾಫಿ ಬೆಳೆಗಾರರಿಗೆ ಕೌಶಲ್ಯ ಸಂಯೋಜಿತ ತರಬೇತಿ ನೀಡಲಾಯಿತು. ಅಲ್ಲದೆ, ಕಾಫಿ ವೈಜ್ಞಾನಿಕ ಸಂಸ್ಕರಣೆ ಮತ್ತು ಮಾರುಕಟ್ಟೆ ವಿಸ್ತರಣೆ ಕುರಿತು ತರಬೇತಿ ನೀಡಲಾಯಿತು. ಬೆಳೆಗಾರರಿಗೆ ಸಂಬಂಧಿಸಿದಂತೆ ಹತ್ತು ಹಲವು ವಿಷಯಗಳ ಕುರಿತು ಗಂಭೀರ ಚರ್ಚೆ ನಡೆದು, ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ಸುಸ್ಥಿರ ಕಾಫಿ ಬೆಳೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆಗಳು ನಡೆದವು. 31 ವಿವಿಧ ದೇಶಗಳಿಂದ 300ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿ, ಮೂರು ದಿನಗಳಲ್ಲಿ ಕಾಫಿ ಬೆಳೆಗಾರರು ಸೇರಿದಂತೆ ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.ಸಮಾವೇಶದ ಜತೆಗೆ ಭಾರತವೂ ಸೇರಿ ವಿವಿಧ ದೇಶಗಳ ಕಾಫಿ ಕಂಪೆನಿಗಳು, ಯಂತ್ರೋಪಕರಣ ಕಂಪೆನಿಗಳು ತಮ್ಮ ಮಳಿಗೆಗಳನ್ನು ಪ್ರಾರಂಭಿಸಿದ್ದು, ವ್ಯವಹಾರಿಕ ಮಾತುಕತೆಗಳು ಫಲಪ್ರದವಾಗಿ ನಡೆದಿವೆ ಎಂದು ಜಗದೀಶ್ ವಿವರಣೆ ನೀಡಿದರು

ಸಮಾರೋಪ ಸಮಾರಂಭಕ್ಕೂ ಮುನ್ನ ಮಾತನಾಡಿದ ಅವರು, ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ದಾಪುಗಾಲು ಹಾಕುತ್ತಿದೆ. ಶೇ. 10 ರಿಂದ 20 ರಷ್ಟು ಮೌಲ್ಯವರ್ಧಿತ ದರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕೊಲಂಬಿಯನ್ ಹೊರತುಪಡಿಸಿ ಭಾರತೀಯ ರೊಬಾಸ್ಟಾ ಕಾಫಿ ಅತಿ ವೇಗವಾಗಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ ಎಂದರು.

ಸಮಾವೇಶದಲ್ಲಿ ಒಟ್ಟು 45 ಗೋಷ್ಠಿಗಳಲ್ಲಿ 127 ತಜ್ಞರು ವಿಷಯ ಪ್ರಸ್ತಾಪಿಸಿದರು. ಅವರಲ್ಲಿ 80 ಮಂದಿ ಅಂತಾರಾಷ್ಟ್ರೀಯ ತಜ್ಞರು ವಿಷಯ ಮಂಡಿಸಿದ್ದು ವಿಶೇಷವಾಗಿತ್ತು. ರಾಜ್ಯದ ಮೂರು ವಿಶ್ವವಿದ್ಯಾಲಯಗಳು ಸಮಾವೇಶದಲ್ಲಿ ವಿಷಯ ತಜ್ಞರಾಗಿ ಭಾಗೀದಾರರಾಗಿದ್ದು, ಒಟ್ಟು ಸಮಾವೇಶದ ಕುರಿತು ವಿವರವಾದ ವಿಷಯ ಮಂಡನೆಯೊಂದಿಗೆ ಮಾಹಿತಿ ನೀಡಿದರು.

ಬೆಳೆಗಾರರಿಗೆ ತರಬೇತಿ : ಸಮಾವೇಶದಲ್ಲಿ ಸಾವಿರಾರು ಕಾಫಿ ಬೆಳೆಗಾರರ ವಿಶೇಷ ತರಬೇತಿಗೆ ವೇದಿಕೆಯಾಯಿತು.
ಈ ವೇಳೆ ಸುಸ್ಥಿರ ಕಾಫಿ ಬೆಳೆ ಸೇರಿದಂತೆ ವಿಶ್ವದೆಲ್ಲೆಡೆ ಭಾರತೀಯ ಕಾಫಿ ಕಂಪು ಪಸರಿಸುತ್ತಿದ್ದು, ಈ ಸಮಾವೇಶವು ಭಾರತೀಯ ಕಾಫಿಗೆ ಇನ್ನಷ್ಟು ವಿಶ್ವಮಾನ್ಯತೆ ದೊರಕಿಸುವಲ್ಲಿ ಸಹಕಾರಿಯಾಯಿತು.