ದಕ್ಷಿಣ ಕೊರಿಯಾದ ಗ್ವಾಂಗ್ಜುವಿನಲ್ಲಿ ನಡೆದ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಬಿಲ್ಲುಗಾರರು ಮಿಂಚಿದ್ದು, ಒಂದು ಚಿನ್ನ, ಬೆಳ್ಳಿ ಜೊತೆಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಪುರುಷರ ವಿಭಾಗದಲ್ಲಿ ಗೋಲ್ಡ್ ಮತ್ತು ಮಿಶ್ರ ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದೆ. ಪುರುಷರ ವಿಭಾಗದಲ್ಲಿ ರಿಷಭ್ ಯಾದವ್, ಅಮನ್ ಸೈನಿ ಮತ್ತು ಪ್ರಥಮೇಶ್ ಫುಗೆ ಅವರ ತಂಡವು ಫೈನಲ್ನಲ್ಲಿ ಫ್ರಾನ್ಸ್ ವಿರುದ್ಧ ಸೆಣಸಾಡಿತು.
ಭರ್ಜರಿ ಪೈಪೋಟಿಯ ಫೈನಲ್ನಲ್ಲಿ ಎರಡು ಅಂಕಗಳ ಅಂತರದಿಂದ ಭಾರತ ಗೆಲುವು ಸಾಧಿಸಿತು. ಭಾರತ 235 ಅಂಕಗಳನ್ನು ಗಳಿಸಿದರೆ, ಫ್ರಾನ್ಸ್ 233 ಅಂಕಗಳನ್ನು ಗಳಿಸಿತು. ಈ ಮೆಗಾ ಈವೆಂಟ್ನಲ್ಲಿ ಇದೇ ಮೊದಲು ಭಾರತೀಯ ಪುರುಷರ ತಂಡವು ಚಿನ್ನ ಗೆದ್ದಿರುವುದು. ಇದೀಗ ಇತಿಹಾಸ ಎಂಬುದು ಗಮನಾರ್ಹ.
ಇದಕ್ಕೂ ಮೊದಲು, ಜ್ಯೋತಿ ಸುರೇಖಾ ವೆನ್ನಮ್ ಮತ್ತು ರಿಷಭ್ ಯಾದವ್ ಅವರ ತಂಡವು ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕವನ್ನು ಕೆಲವೇ ಅಂತದಲ್ಲಿ ಕಳೆದುಕೊಂಡಿತು. ಫೈನಲ್ನಲ್ಲಿ ಡಚ್ ಜೋಡಿಯ ವಿರುದ್ಧ ಎರಡು ಅಂಕಗಳಿಂದ ಸೋತರು. ಭಾರತ ತಂಡ 155 ಅಂಕಗಳನ್ನು ಗಳಿಸಿದರೆ, ಡಚ್ ತಂಡ 157 ಅಂಕಗಳನ್ನು ಗಳಿಸಿತು. ಈ ಮಧ್ಯೆ, ವಿಶ್ವ ಚಾಂಪಿಯನ್ಶಿಪ್ನಲ್ಲಿ ಜ್ಯೋತಿ ಸುರೇಖಾ ಅವರ ಒಂಬತ್ತನೇ ಪದಕ ಇದಾಗಿದೆ.












