ಉಡುಪಿ, ಬಂಟಕಲ್: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ
ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕವು IEEE SPAX ಮತ್ತು IEEE Foundation ಸಹಯೋಗದೊಂದಿಗೆ ದಿನಾಂಕ 14 ಫೆಬ್ರವರಿ 2026 ರಂದು “ಟೆಕ್ -ಲೀಡ್ 2026 ಮುಂದಿನ ಇಂಜಿನಿಯರ್‌ಗಳಿಗೆ ವೃತ್ತಿಪರ ಕೌಶಲ್ಯದ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ಗ್ಲನ್ಸನ್ ಟೋನಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಇಂದಿನ ವೃತ್ತಿಪರ ಜಗತ್ತಿನಲ್ಲಿ ತಾಂತ್ರಿಕ ಜ್ಞಾನದ ಜೊತೆಗೆ ಉತ್ತಮ ಸಂವಹನ ಕೌಶಲ್ಯ, ನಾಯಕತ್ವ ಗುಣ ಭಾವನಾತ್ಮಕ ಬುದ್ದಿಮತ್ತೆ ಹೊಂದಿಕೊಳ್ಳುವ ಸಾಮರ್ಥ್ಯ ಹಾಗೂ ನೈತಿಕ ಜವಾಬ್ದಾರಿ ಇರುವ ಇಂಜಿನಿಯರ್‌ಗಳನ್ನು ಹುಡುಕುತ್ತಿದ್ದಾರೆ ಎಂದರು. ಓದುವ ಅಭ್ಯಾಸ ಬೆಳೆಸಿಕೊಳ್ಳಲು, ನೆಟ್‌ವರ್ಕಿಂಗ್ ಮಾಡಿಕೊಳ್ಳಲು ಹಾಗೂ ಐಇಇಇ ಮುಂತಾದ ವೃತ್ತಿಪರ ವೇದಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಐಇಇಇ ಘಟಕವು ನೀಡುತ್ತಿರುವ ಕೊಡುಗೆಯನ್ನು ಪ್ರಸ್ತಾಪಿಸಿದರು.
ಈ ಕಾರ್ಯಕ್ರಮವನ್ನು ಐಇಇಇ ಘಟಕದ ಸಂಯೋಜಕರಾದ ಡಾ. ನಾಗರಾಜ್ ರಾವ್ ಸಂಯೋಜಿಸಿದರು.ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ನೀಡಿದ ಪರಿಣಾಮಕಾರಿ ಕಾರ್ಯಕ್ರಮವಾಗಿದ್ದು, ವೃತ್ತಿಪರ ಸವಾಲುಗಳನ್ನು ಎದುರಿಸಲು ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧರಾದ ಸಮರ್ಥ ಇಂಜಿನಿಯರ್‌ಗಳನ್ನು ರೂಪುಗೊಳಿಸಲು ಸಹಕಾರಿಯಾಗಿದೆ.
















