ಬ್ರಹ್ಮಾವರ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ ಮತ್ತು ಇಂಡಿಯನ್ ಬೇಕರಿ ಫೆಡರೇಶನ್, ಇದರ ಸಹಭಾಗಿತ್ವದಲ್ಲಿ ಬೇಕರ್ಸ್ ಮೀಟ್, ಎಂಬ ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮವು ಸೆ.10 ರಂದು ಬ್ರಹ್ಮಾವರದ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಲಿರುವುದು.
ತಯಾರಿಕ ಘಟಕಗಳು ಮತ್ತು ಮಾರಾಟ ಮಳಿಗೆಗಳ ಸ್ವಚ್ಛತೆ, ಸರಕಾರದ ನಿಯಮಾವಳಿಗಳ ಅನುಸಾರ ಉದ್ಯಮವನ್ನು ನಡೆಸುವುದರ ಬಗ್ಗೆ ಮಾಹಿತಿ ಮತ್ತು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಕಾರ್ಯಾಗಾರ ನಡೆಯಲಿದೆ.
ಡಾಕ್ಟರ್ ಪ್ರೇಮಾನಂದ ಕೆ, ( ಅಂಕಿತಾಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗ ಉಡುಪಿ ಜಿಲ್ಲೆ) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಾಷ್ಟ್ರಮಟ್ಟದ ಬೇಕರಿ ಸಂಘಟನೆಯ ಪದಾಧಿಕಾರಿಗಳಾದ ಪಿ, ಏನ್, ಶಂಕರನ್, ಕೆ.ಆರ್ ಬಾಲನ್, ಬಾಲರಾಜ್ ಕೆ.ಆರ್, ಸುಹಾಸ್ ಉಪಾಧ್ಯಾಯ ( ಕರ್ನಾಟಕ ಬೇಕರಿ ಸಂಘ ), ಕಿರಣ್ ಕೇರಳ ಬೇಕರಿ ಅಸೋಸಿಯೇಷನ್, ರಂಜಿತ್ ಕೇಕ್ ತಯಾರಿಕೆಯಲ್ಲಿ ಗಿನ್ನಿಸ್ ರೆಕಾರ್ಡ್, ಎಂ.ಎನ್ ಅರವಿಂದ್ ಮ್ಯಾನೇಜಿಂಗ್ ಡೈರೆಕ್ಟರ್ ಟೇಸ್ಟಿ ವರ್ಲ್ಡ್ ಫುಡ್ ಫ್ಯಾಕ್ಟರಿ ಚಿಕ್ಕಮಗಳೂರು ಭಾಗವಹಿಸಲಿದ್ದಾರೆ,
ಜಿಲ್ಲಾದ್ಯಂತ ನೆಲೆಸಿರುವ ಎಲ್ಲಾ ಬೇಕರಿ ಆಹಾರ ಉತ್ಪಾದಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಘದ ಆಡಳಿತ ಮಂಡಳಿ ತಿಳಿಸಿದೆ.